ಚಿಕ್ಕೋಡಿ

ಕಬ್ಬು ನುರಿಯುವ ಹಂಗಾಮು: ಕಬ್ಬು ಕಟಾವು ಕಾರ್ಮಿಕರ ಟೆಂಟ್‌ಗಳ ನಿರ್ಮಾಣ

ಕಬ್ಬು ನುರಿಯುವ ಹಂಗಾಮು: ಕಬ್ಬು ಕಟಾವು ಕಾರ್ಮಿಕರ ಟೆಂಟ್‌ಗಳ ನಿರ್ಮಾಣ

ಮಾಂಜರಿ 29: 2025-26 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ನ. 1 ರಿಂದ ಪ್ರಾರಂಭಗೊಳ್ಳಲಿದ್ದು, ಗಡಿ ಭಾಗದ ಪ್ರತಿಯೊಂದು ಗ್ರಾಮದ ಹೊರವಲಯದ ಕಬ್ಬು ಕಟಾವು ಕಾರ್ಮಿಕರು ಸುರಕ್ಷಿತ ಸ್ಥಳಗಳನ್ನು ಹುಡುಕಿ ಟೆಂಟಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. 

ಕಬ್ಬು ಬೆಳೆಗಾರರು ಮಳೆಯ ಆಭಾವ, ಪ್ರವಾಹ, ದೊಣ್ಣೆ ಮತ್ತು ಬಿಳಿಹುಳಗಳ ಕಾಟದಿಂದ ಉತ್ಪಾದನೆ ಕುಂಠಿತವಾಗಿದ್ದು, ಸಾಲ-ಸೂಲದೊಂದಿಗೆ ಕಬ್ಬು ಉತ್ಪಾದನೆ ಮಾಡಿರುವ ನೋವು ಇನ್ನೊಂದಡೆಯಾದರೆ, ಜೀವನದ ಹೊಟ್ಟೆ ಹೊರೆಯಲು ಮಹಾರಾಷ್ಟ್ರದ ಕಬ್ಬು ಕಟಾವುಗಾರರು ರಾಜ್ಯದ ಗಡಿಭಾಗದಲ್ಲಿ ತಮ್ಮ ಸರಕು ಸರಜಾಮುನೊಂದಿಗೆ ಸಕ್ಕರೆ ಕಾರಖಾನೆಗಳ ಸುತ್ತಮುತ್ತಲಿನ ಗ್ರಾಮಗಳ ರಸ್ತೆಯ ಬದಿಯಲ್ಲಿ ಹಾಗೂ ಖಾಲಿಯಿದ್ದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕವರಗಳ ಗುಡಿಸಲುಗಳನ್ನುನಿರ್ಮಿಸಿಕೊಳ್ಳುತ್ತಿದ್ದಾರೆಮಹಾರಾಷ್ಟ್ರದ ಬೀಡ, ಉಸ್ಮಾನಾಬಾದ, ಜತ್, ಪಂಡರಪೂರ, ವಿಜಯಪುರ ಜಿಲ್ಲೆಗಳಿಂದ ಕಬ್ಬು ಕಟಾವು ಕೆಲಸ ಅವಲಂಬಿಸಿ ಸಂಸಾರ ಸಮೇತ ಆಗಮಿಸುವ ಕಬ್ಬು ಕಟಾವು ಕಾರ್ಮಿಕರ ಬದುಕು ಬಯಲಿನಲ್ಲಿಯೇ ಆರಂಭವಾಗಿದೆ. ಕಳೆದ ಫೆಬ್ರುವರಿಯಿಂದ ಅಕ್ಟೋಬರ ಮೂರನೇ ವಾರದವರೆಗೆ ಬಿಕೋ ಎನ್ನುತ್ತಿದ್ದ ಬಯಲು ಹೊಲ, ಗುಡಿಸಲುಗಳಲ್ಲಿ ದೀಪದ ಕಾಣಿಸುತ್ತಿದೆ. ಬೆಳಕು ನ. 1 ರಿಂದ ರಾಜ್ಯದ ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಲಿದ್ದು, ಮತ್ತು ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿದಸಕ್ಕರೆ ಕಾರಖಾನೆಗಳು ನ. 10 ರಿಂದ ಕಬ್ಬು ನುರಿಸುವ ಕಾರ್ಯ ಆರಂಬಿಸಲಿದ್ದಾರೆ. ಗಡಿಭಾಗದಲ್ಲಿ ಇಂದಿಗೂ ಕಾರ್ಮಿಕರು ರಾಜ್ಯದ ಗಡಿ ಭಾಗದಲ್ಲಿ ಆಗಮಿಸುತ್ತಿದ್ದಾರೆ. 

ಪ್ರತಿಯೊಂದು ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೂರು ಕಲ್ಲಿನ ಒಲೆ. ವಾಸ್ತವಕ್ಕೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳು, ಜೊತೆಗೆ ಅಲ್ಯೂಮಿನಿಯಂ ಬಕೆಟ್, ಧಾನ್ಯ, ಮಸಾಲೆ, ಅಡುಗೆ ಪದಾರ್ಥ ಸೇರಿದಂತೆ ಕೆಲ ಪಾತ್ರೆಗಳೊಂದಿಗೆ ಅವರ ಚಿಕ್ಕ ಸಂಸಾರದೊಂದಿಗೆ ಆಗಮಿಸಿದ್ದಾರೆ. 

ಒಟ್ಟಿನಲ್ಲಿ ಇಂದಲ್ಲ ನಾಳೆ ತಮಗೂ ಒಳ್ಳೆಯ ದಿನಗಳು ಬರಬಹುದು ಎಂಬ ಕನಸು ಹೊತ್ತು ಶ್ರಮಿಸುವ ಕೂಲಿಕಾರರು ಕಾರ್ಖಾನೆಯ ಚಕ್ರ ನಿಲ್ಲುತ್ತಿದ್ದಂತೆ ಸಂಸಾರ ಸಮೇತ ತಮೂರಿನತ್ತ ಸಾಗುತ್ತಾರೆ. ಒಟ್ಟಿನಲ್ಲಿ ನಾನಾ ಕಬ್ಬಿನ ಗದ್ದೆಗಳಲ್ಲಿ ಹಾಗೂ ಖಾಲಿಯಿದ್ದ ಸ್ಥಳಗಳಲ್ಲಿ ರವದಿ ಗುಡಿಸಲುಗಳನ್ನು ಮಾಡಿಕೊಂಡು ವಾಸವಾಗಿತ್ತಿರುವ  ದೃಶ್ಯಗಳು ನೋಡಲು ಸಿಗುತ್ತವೆ. 


ಸುದ್ದಿ ಓದಿ