ಸುಧಾಕರ್ಗೆ ಡಾಕ್ಟರೇಟ್ ಪದವಿ
ಲೋಕದರ್ಶನ ವರದಿ
ಬಳ್ಳಾರಿ 12: ಸ್ಥಳೀಯ ಗಾಂಧಿನಗರ ನಿವಾಸಿಯಾದ ಸುಧಾಕರ್ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ.
ಸುಧಾಕರ್ ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೋಹನ್ದಾಸ್.ಕೆ. ಅವರ ಮಾರ್ಗದರ್ಶನದಲ್ಲಿ ‘ಭಾರತದಲ್ಲಿ ಹಣದ ಅಮಾನ್ಯೀಕರಣ ರಾಜಕೀಯ- ಒಂದು ವಿಮರ್ಶಾತ್ಮಕ ಅಧ್ಯಯನ' ಎಂಬ ವಿಷಯವಾಗಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ಘೋಷಣೆ ಮಾಡಿದೆ.