ಮುದ್ದೆಬಿಹಾಲ್

ಎಮ್ ಎಮ್ ಬೆಳಗಲ್ಲ ಸಂತ ಕನಕದಾಸ ಶಾಲೆಗೆ ದಿಢೀರ್ ಭೇಟಿ

ಎಮ್ ಎಮ್ ಬೆಳಗಲ್ಲ ಸಂತ ಕನಕದಾಸ ಶಾಲೆಗೆ ದಿಢೀರ್ ಭೇಟಿ

ಮುದ್ದೇಬಿಹಾಳ 01:  ತಾಲೂಕಿನ ನೂತನ  ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಎಮ್ ಎಮ್ ಬೆಳಗಲ್ಲ ಅವರು ಪಟ್ಟಣದ ಸಂತ ಕನಕದಾಸ ಶಾಲೆಗೆ ಗುರುವಾರ ದಿಢೀರ್ ಭೇಟಿ ನೀಡಿ ಸರಕಾರದಿಂದ ಮಕ್ಕಳಿಗೆ ನೀಡು ಮದ್ಯಾಹ್ನದ ಬಿಸಿಯೂಟವನ್ನು ಪರೀಶೀಲಿಸಿ ಗುಣಮಟ್ಟ ಆಹಾರ ನೀಡುತ್ತಿರುವ ಮತ್ತು ಸಮಸ್ಯೆಗಳ ಕುರಿತು ಪರೀಶೀಲನೆ ನಡೆಸಿದರು. 

ಈ ವೇಳೆ ಮಾತನಾಡಿದ ಅವರು ಶಾಲೆಯಲ್ಲಿ ಮಕ್ಕಳು ಬೇಧಭಾವ ಹೊಂದಬಾರದು ಎಲ್ಲ ವರ್ಗದ ಮಕ್ಕಳು ಹಸಿವಿನಿಂದ ಬಳಲಬಾರದು, ಜೊತೆಗೆ ಶಿಕ್ಷಣ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸಧ್ಯ ಸರಕಾರ ಶಾಲಾ ಮಕ್ಕಳಿಗೆ ಮದ್ಯಾಹ್ನದ ಹೊತ್ತು ಬಿಸಿ ಊಟದ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 

ಈ ಹಿನ್ನೆಲೆಯಲ್ಲಿ ನನ್ನ ಅಧಿಕಾರದವಧಿಯಲ್ಲಿ ಅಡುಗೆ ಸಿಬ್ಬಂದಿಗಳಾಗಲಿ ಆಯಾ ಶಾಲಾ ಆಡಳಿತ ಮಂಡಳಿಯಾಗಲಿ ಮುಖ್ಯಶಿಕ್ಷಕರಾಗಲಿ ಮಕ್ಕಳಗೆ ನೀಡುವ ಆಹಾರದಲ್ಲಿ ಯಾವೂದೇಕುಂದು ಕೊರತೆ, ತೊಂದರೆಯಾಗದಂತೆ ಗುಣಮಟ್ಟ ಆಹಾರ ನೀಡುವುದರೊಂದಿಗೆ ಮಕ್ಕಳಲಲ್ಲಿ ಪೌಷ್ಠಿಕಾಂಶ ನೀಡುವುದು ಪ್ರಮುಖ ಕರ್ತವ್ಯವಾಗಿದೆ ಎಂದು ಎಚ್ಚರಿಕೆ ವಹಿಸುವ ಮೂಲಕ ಬಿಸಿಯೂಟ ಯೋಜನೆ ಸಾರ್ಥಕಗೊಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.  

ಒಂದುವೇಳೆ ಏನಾದರೂ ತಪ್ಪು ತಡೆಗಳು ಕಂಡುಬಂದರೆ ನಾನು ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೇಯೇ ಇಲ್ಲ ಎಂದರು ನಾನೂ ಕೂಡ  ಪ್ರಾಮಾಣಿಕವಾದ ಕೆಲಸವನ್ನು ಅಚ್ಚು ಕಟ್ಟಾಗ ಮಾಡುತ್ತೇನೆ ಹಾಗೂ  ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕಾಂಶ ಆಹಾರ ಸರಿಯಾಗಿ ನಮ್ಮ ತಾಲ್ಲೂಕಿನ ಎಲ್ಲಾ ಮಕ್ಕಳಿಗೆ ದೊರಕಲಿ ಎಂದು ಹೇಳಿದರು. 

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಎಂ ಎಂ ಬೆಳಗಲ್ಲ ಅವರನ್ನು ಸಂತ ಕನಕದಾಸ  ಶಾಲೆಯ ಶಿಕ್ಷಕ ಸಿಬ್ಬಂದಿಯವರು ಸನ್ಮಾನಿಸಿ ಗೌರವಿಸಿದರು. ಆರ್ ಜಿ ಮೆಣಸಗಿ, ಆರ್ ವಾಯ್ ಪಾಟೀಲ, ಎಲ್ ಎಚ್ ಗುಬಚಿ ,ಎಲ್ ಎಸ್ ಮೇಟಿ, ಬಿ ಎ ಬರದೇನಾಳ ಮುಂತಾದ ಶಿಕ್ಷಕರು ಉಪಸ್ಥಿತಿ ಇದ್ದರು.  

ಶಾಲೆಯ ಮುಖ್ಯ ಗುರುಗಳಾದ ಎಮ್ ಎನ್ ಯರಝರಿ ಸ್ವಾಗತಿಸಿದರು ಗೋಪಾಲ ಹೂಗಾರ ನಿರೂಪಿಸಿದರು. ಎಮ್ ಸಿ ಕಬಾಡೆ ವಂದಿಸಿದರು. 


ಸುದ್ದಿ ಓದಿ