ಚಿಕ್ಕೋಡಿ

ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಾಹಿತಿ ಸುಬ್ರಾವ ಎಂಟೆತ್ತಿನವರ ನೇಮಕ

ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಾಹಿತಿ ಸುಬ್ರಾವ ಎಂಟೆತ್ತಿನವರ ನೇಮಕ

ಚಿಕ್ಕೋಡಿ ಸೆಪ್ಟೆಂಬರ್ 12: ಕೆಎಲ್‌ಇ ಸಂಸ್ಥೆಯ ರಾಣೇಬೆನ್ನೂರು ಪಿಯು ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಚಿಕ್ಕೋಡಿ ಪಟ್ಟಣದ ಡಾ.ಸುಬ್ರಾವ್ ಎಂಟೆತ್ತಿನವರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ರಾಜ್ಯ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದು,ಪರಿಷತ್ತಿನ ಕಾರ್ಯಕಾರಿಣಿ  ಸಮಿತಿ ಸಭೆಗಳಲ್ಲಿ ಸಕ್ರಿಯವಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಸೂಚನೆ ನೀಡಿ ಸಹಕರಿಸಬೇಕೆಂದು ಆದೇಶದ ಮೂಲಕ ಕೋರಿದ್ದಾರೆ.

ಸುದ್ದಿ ಓದಿ