ಎಕ್ಸಲೆಂಟ್ ಅವಾರ್ಡ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಲೋಕದರ್ಶನ ವರದಿ,
ಜಮಖಂಡಿ: 13: ನಗರದ ಹುಲ್ಯಾಳ ಕ್ರಾಸ್ ಬಳಿವಿರುವ ಶ್ರೀಗುರುದೇವ ರಾನಡೆ ಮೆಮೋರಿಯಲ್ ಶಿಕ್ಷಣಸಂಸ್ಥೆ ವಿದ್ಯಾ ಭವನ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ದಲ್ಲಿ ಶೈಕ್ಷಣಕ ವರ್ಷದಲ್ಲಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳು ಎಕ್ಸಲೆಂಟ್ ಅವಾರ್ಡ ಪರೀಕ್ಷೆ ಬರೆದರು.
ತಾಲೂಕಿನ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯಲ್ಲಿ ಬೇಸಿಕ್ ಮ್ಯಾಥಮೆಟಿಕ್ಸ್, ಬೇಸಿಕ್ ಸೈನ್ಸ್ ಮತ್ತು ಕನ್ನಡ, ಇಂಗ್ಲಿಷ್ ಗ್ರಾಮರ್ ವಿಷಯಗಳೊಂದಿಗೆ ವಿದ್ಯಾಥರ್ಿಗಳಿಗೆ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಎಕ್ಸಲೆಂಟ್ ಅವಾರ್ಡ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 12 ಸಾವಿರ ನಗದು, ದ್ವೀತಿಯ ಸ್ಥಾನಕ್ಕೆ 8 ಸಾವಿರ ಮತ್ತು ತೃತೀಯ ಸ್ಥಾನಕ್ಕೆ 5 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದು ಆಡಳಿತಾಧಿಕಾರಿ ಶ್ರೀನಿವಾಸ ಅಪರಂಜಿ ತಿಳಿಸಿದರು.
ವಿದ್ಯಾಭವನ ಸಮೂಹ ಶಿಕ್ಷಣಸಂಸ್ಥೆ ಮುಖ್ಯಸ್ಥ ಪ್ರಸಾದ ಅಪ್ಟೆ, ಪ್ರಾಚಾರ್ಯ ಅನು ಮುಲ್ಲಾ, ಆಪ್ತಸಮಾಲೋಚಕಿ ರಜನಿ ಬಿರಾದಾರ, ತರಬೇತುದಾರರಾದ ಶಿವಾನಂದ ಗೋಕಾವಿ, ಅಶೋಕ ಕಟ್ಟಿಮನಿ, ಕಿರಣ ಪುಕಾಳೆ, ಶಿವಕುಮಾರ ಪತ್ತಾರ, ಈರಪ್ಪ ಜಮಖಂಡಿ ಸೇರಿದಂತೆ ಇತರರು ಪರೀಕ್ಷೆಗಳ ಉಸ್ತುವಾರಿ ವಹಿಸಿದ್ದರು.