ನಿಗದಿತ ಸಮಯಕ್ಕೆ ಬಸ್ ಓಡಿಸಲು ವಿದ್ಯಾರ್ಥಿಗಳು ಆಗ್ರಹ
ಲೋಕದರ್ಶನ ವರದಿ
ಹೂವಿನ ಹಡಗಲಿ 25: ಈಗಾಗಲೇ ಸರ್ಕಾರ ಆದೇಶ ಮೇರೆಗೆ 9ರಿಂದ ಪಿಯುಸಿ ಕಾಲೇಜುಗಳಲ್ಲಿ ತರಗತಿ ಆರಂಭವಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ನಿಗದಿತ ಸಮಯಕ್ಕೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಬುಧವಾರ ಪಟ್ಟಣದ ಡಿಪೋ ಮುತ್ತಿಗೆ ಹಾಕಿ ಪ್ರತಿಭಟನೆ ನಂತರ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಓತ್ತಾಯಿಸಿದರು.
ಕೋವಿಡ್ 19 ನಿಂದ ಇಲ್ಲಿಯವರೆಗೆ ಶಾಲಾ ಹಿಕಾಲೇಜುಗಳ ಪ್ರಾರಂಭವಾಗಿದ್ದಿಲ್ಲ ಇದೀಗ 23ರಂದು ಸರ್ಕಾರ ಆದೇಶದಿಂದ ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿದ್ದು, ತಾಲೂಕಿನ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ ವಿದ್ಯಾರ್ಥಿಗಳುಗೆ ಅನುಕೂಲಮಾಡಿಕೊಡಬೇಕೆಂದು ಸಾರಿಗೆ ಇಲಾಖೆಗೆ ಸಂಘಟನೆಯ ಪ್ರಭು, ಪ್ರವೀಣ ಸೇರಿದಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದೆ.