ಸುಭದ್ರ ರಾಷ್ಟ್ರ ನಿರ್ಮಾಣ ಕ್ಕೆ ವಿದ್ಯಾರ್ಥಿಗಳು ಕೈ ಜೋಡಿಸಿ: ಕುನ್ನೂರ
ಲೋಕದರ್ಶನ ವರದಿ
ಶಿಗ್ಗಾವಿ 10: ಭಾರತ ದೇಶದಲ್ಲಿ ಮಹತ್ಮಾ ಗಾಂಧಿಜೀಯವರು ಕನಸು ಕಂಡಿದ್ದ ಗ್ರಾಮ ಸ್ವ-ರಾಜ್ಯದ ಪ್ರತಿ ಫಲವಾಗಿ 1969 ಸೆ. 24 ರಂದು ಎನ್ಎಸ್ಎಸ್ ರಾಷ್ಟ್ರದಲ್ಲಿ ಆರಂಭವಾಯಿತು. ಸದಾ ಸೇವೆಗೆ ಸಿದ್ಧವಾಗಿ ಶಿಸ್ತು, ಸಮಯ ಪಾಲನೆ, ಸಹಬಾಳ್ವೆ ಮತ್ತು ಶ್ರಮದಾನಗಳ ಮೂಲಕ ಎನ್ಎಸ್ಎಸ್ ಸಮಾಜದಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ತಾಲೂಕಿನ ಕಡಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಗ್ಗಾವಿಯ ರಂಭಾಪುರಿ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಎನ್ಎಸ್ಎಸ್ ತತ್ವ ತಳಹದಿಯ ಮೇಲೆ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಸುಭದ್ರ ರಾಷ್ಟ್ರ ನಿಮರ್ಾಣಕ್ಕೆ ಕೈ ಜೋಡಿಸಬೇಕು ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ಗಂಜಿಗಟ್ಟಿಯ ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಈ ಸಂಘಟನೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಸೇವೆ ಬಗೆಗೆ ತಿಳಿಸಲು ರೂಪಿತವಾದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಹತ್ತು ಹಲವು ಶಿಬಿರಗಳು ಸಾಮಾಜಿಕ ಅಭಿವೃದ್ಧಿಗೆ ಪ್ರೇರಕವಾಗಿವೆ ಎಂದು ಆಶೀರ್ವಚನ ನೀಡಿದರು.
ಭಾಕ್ಸ ಸುದ್ದಿ : ರಂಭಾಪುರಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ, ಶೀಲವಂತ ಸೋಮಾಪುರದ ಯೋಧ ಶಿವರಾಜ ಗಂಗಮ್ಮನವರ ಪಂಜಾಬಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಸಾವನ್ನಪ್ಪಿದ್ದರಿಂದ ಗೌರವಾರ್ಥವಾಗಿ ಮೌನಾಚರಣೆ ಮಾಡಿ ನಮನ ಸಲ್ಲಿಸಲಾಯಿತು.
ಮಾಜಿ ಶಾಸಕ ಅಜ್ಜಂಪೀರ್.ಎಸ್.ಖಾದ್ರಿ ಮಾತನಾಡಿ ಪಟ್ಟಣದ ವಿದ್ಯಾರ್ಥಿಗಳಿಗೆ ಹಳ್ಳಿಯ ಸೊಬಗನ್ನು ನೋಡುವ ಜೊತೆಗೆ ಗ್ರಾಮೀಣ ಭಾಗದ ಸಂಸ್ಕೃತಿ, ಸಂಪದ್ರಾಯ, ಆಡಳಿತ ವ್ಯವಸ್ಥೆಯ ಜೊತೆ ಸೇವಾ ಯೋಜನೆಯ ಮೂಲಕ ಗ್ರಾಮೀಣ ಸೇವೆ ಮಾಡುವ ಒಳ್ಳೆಯ ಅವಕಾಶ ಎಂದರು.
ಸಮಾಜಸೇವಕ ಶಶಿಧರ ಯಲಿಗಾರ ಮಾತನಾಡಿ ವಿದ್ಯಾರ್ಥಿಗಳಿಗೆ ಸಮಾಜಸೇವೆಯನ್ನು ಕಾಲೇಜ ಮಟ್ಟದಲ್ಲಿ ಪ್ರೇರೇಪಿಸುವ ಮಹಾತ್ವಕಾಂಕ್ಷೆ ಯೋಜನೆಯೇ ರಾಷ್ಟ್ರೀಯ ಸೇವಾ ಯೋಜನೆ ಈ ಯೋಜನೆಯಿಂದ ಕೆಲವು ಗ್ರಾಮಗಳಲ್ಲಿ ಮಧ್ಯಪಾನ, ಗುಟಕಾ ಸೇವನೆ ಎಂತಹ ವ್ಯಸನಿಗಳಿಗೆ ಜಾಗೃತಿ ಮೂಡಿಸಲು ಸೂಕ್ತ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಜರೀನಾಬಾನು ಹುಲಗೂರ, ಉಪಾಧ್ಯಕ್ಷೆ ದ್ರಾಕ್ಷಾಯಿಣೆವ್ವ ಮಾದರ, ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಎಸ್.ಬಿ.ಹಿರೇಮಠ, ಶೈಕ್ಷಣಿಕ ನಿದರ್ೇಶಕ ಪಿ.ಸಿ.ಹಿರೇಮಠ, ಗ್ರಾ.ಪಂ ಸದಸ್ಯ ಬಸವನಗೌಡ ರಾಮನಗೌಡ್ರ, ಗ್ರಾಮದ ಹಿರಿಯರಾದ ಶಿವಲಿಂಗಪ್ಪ ಹುಬ್ಬಳ್ಳಿ, ಈಶ್ವರ ಬೇಂಡಿಗೇರಿ, ಮಾಲತೇಶ ದಾಸೂರ, ಮಹಾದೇವಪ್ಪ ದುಂಢಶಿ, ಎಸ್ಡಿಎಂಸಿ ಅಧ್ಯಕ್ಷ ರಮೇಶ ಮುಂದಿನಮನಿ, ರಂಭಾಪುರಿ ಕಾಲೇಜಿನ ಪ್ರಾಚಾರ್ಯ ಎಫ್.ಎಸ್.ಶಿವಣ್ಣವರ, ಸ.ಹಿ.ಪ್ರಾ.ಶಾಲೆಯ ಪ್ರಧಾನ ಶಿಕ್ಷಕ ಸಿ.ಐ.ಕಟ್ಟಿಗೌಡ್ರ, ನಾರಾಯಣ ಪ.ಪೂ ಕಾಲೇಜಿನ ಪ್ರಾಚಾರ್ಯ ಸಂತೋಷ ಬಡಿಗೇರ, ಶಿವಪುತ್ರಪ್ಪ ಜಕ್ಕಣ್ಣವರ, ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಶಿಕ್ಷಕ ಶಿವು ಹಾವೇರಿ, ವಿವಿಧ ಗಣ್ಯರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು