ಬಳ್ಳಾರಿ

ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಬಸ್ ಪಾಸ್ ಸೌಲಭ್ಯ ಪ್ರಾರಂಭಿಸಲು ಅಭಾವಿಪ ಆಗ್ರಹ

ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಬಸ್ ಪಾಸ್ ಸೌಲಭ್ಯ ಪ್ರಾರಂಭಿಸಲು ಅಭಾವಿಪ ಆಗ್ರಹ

ಬಳ್ಳಾರಿ 19:  ಕೋವಿಡನ ಎರಡನೆಯ ಅಲೆಯಿಂದಾಗಿ ರಾಜ್ಯದ ಎಲ್ಲ ಹಾಸ್ಟೆಲ್‌ಗಳು ಸೇರಿದಂತೆ ಎಲ್ಲಾ ಕಾಲೇಜುಗಳು ಕಳೆದ 3-4 ತಿಂಗಳುಗಳಿಂದ ಬಂದ ಆಗಿದ್ದವು. ಪ್ರಸ್ತುತ ರಾಜ್ಯ ಸರಕಾರವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದಾಗಿ ಬರುವ ದಿನಗಳಲ್ಲಿ ರಾಜ್ಯದ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವಂತೆ ಸಲಹೆ ನೀಡಿರುವುದನ್ನು ಅಭಾವಿಪ  ಸ್ವಾಗತಿಸುತ್ತದೆ.  

ರಾಜ್ಯದ ಅನೇಕ ಬಡ ಮತ್ತು  ಪ್ರತಿಭಾವಂತ ವಿದ್ಯಾರ್ಥಿಗಳು ಹಾಸ್ಟೆಲಗಳಿಗೆ ಅವಲಂಭಿತರಾಗಿರುವುದರಿಂದ ರಾಜ್ಯದ ಹಿಂದುಳಿದ ವರ್ಗ, ಸಮಾಜ ಕಲ್ಯಾಣ  ಮತ್ತು ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಯ ಬರುವ ಎಲ್ಲಾ ಹಾಸ್ಟೆಲ್‌ಗಳನ್ನು ತೆರೆಯಬೇಕು ಮತ್ತು ಉನ್ನತ ಶಿಕ್ಷಣ ಇಲಾಖೆಯೂ ಈ ಇಲಾಖೆಗಳೊಂದಿಗೆ  ಸಮನ್ವಯದೊಂದಿಗೆ   ಸಂಬಂಧಪಟ್ಟ ಎಲ್ಲ ಕ್ರಮಗಳನ್ನು ತೆಗೆದುಕೊಂಡು  ಸ್ಯಾನಿಟೈಜರ್ ಮಾಡಿಸಿ ಹಾಸ್ಟೆಲ್‌ಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿರಲು ಅವಕಾಶ ಮಾಡಿಕೊಡಬೇಕೆಂದು ಅಭಾವಿಪ ಆಗ್ರಹಿಸುತ್ತದೆ.  

ಕೋವಿಡ್‌-19 ರ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು  ಹಾಸ್ಟೆಲ್‌ಗಳಲ್ಲಿ ತಂಗುವ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷೆಗೆ ಮೊದಲ ಆದ್ಯತೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಕಾಲೇಜುಗಳಲ್ಲಿ  ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ  ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ತಕ್ಷಣವೇ ಬಸ್ ಪಾಸ್ ಸೌಲಭ್ಯ ಮಾಡಿಕೊಡಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಸರಕಾರವನ್ನು  ಆಗ್ರಹಿಸುತ್ತದೆ. ಈ ಸಂದರ್ಭದಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಕೌಶಿಕ್, ಬಳ್ಳಾರಿ ವಿಭಾಗ ಸಹ ಸಂಚಾಲಕ ಹರ್ಷನಾಯ್ಕ್‌, ಜಿಲ್ಲಾ ಸಂಚಾಲಕ ನವೀನ್ ಕುಮಾರ್, ಪ್ರಸಾದ್, ಆನಂದ್, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ