ತಾಳಿಕೋಟಿ

ವಿದ್ಯಾರ್ಥಿನಿಯರಿಂದ ಶಾಸಕ ನಡಹಳ್ಳಿಗೆ ಸನ್ಮಾನ

ವಿದ್ಯಾರ್ಥಿನಿಯರಿಂದ ಶಾಸಕ ನಡಹಳ್ಳಿಗೆ ಸನ್ಮಾನ

ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಇವರನ್ನು ನಾಗೂರ ಸರಕಾರಿ ಶಾಲೆಯ ವಿದ್ಯಾರ್ಥಿನಿಯರು ಅವರು ಶಿಕ್ಷಣ ರಂಗದಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಮೆಚ್ಚಿ ಅವರನ್ನು ಸನ್ಮಾನಿಸಿ ತಮ್ಮ ಮನವಿಯನ್ನೂ ಸಲ್ಲಿಸಿದರು.

ಮತಕ್ಷೇತ್ರದ ನಾಗೂರ ಗ್ರಾಮದಲ್ಲಿ ಇತ್ತೀಚೆಗೆ ಸುಮಾರು 253 ಲಕ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು.

ವಿದ್ಯಾರ್ಥಿನಿಯರಿಂದ ಸನ್ಮಾನ ಸ್ವೀಕರಿಸಿ ಅವರ ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಇಲ್ಲಿಯ ಶಾಲೆಯಲ್ಲಿರುವ ಮೂಲ ಸೌಕರ್ಯಗಳ ಕೊರತೆಯನ್ನು ದೂರಿಕರಿಸಲು ಶೀಘ್ರ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಜೊತೆಗೆ ಇಲ್ಲಿಯ ಮಕ್ಕಳಿಗೆ ಶಾಲೆಗೆ ಸರಿಯಾದ ಸಮಯಕ್ಕೆ ತಲುಪುವಂತಾಗಲು ಸಾರಿಗೆ ಬಸ್ ವ್ಯವಸ್ಥೆ ಸರಿಪಡಿಸಲಾಗುವುದು ಎಂದರು.

ನಮ್ಮ ಕ್ಷೇತ್ರದ ಮಕ್ಕಳು ಯಾವ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಆರ್ಥಿಕ ಸಮಸ್ಯೆ ಅವರ ವ್ಯಾಸಂಗಕ್ಕೆ ತೊಡಕಾಗಬಾರದು ಇದಕ್ಕಾಗಿಯೇ ನಾನು ಪ್ರತಿ ವರ್ಷ ವೈಯಕ್ತಿಕವಾಗಿ ಸುಮಾರು ರೂ. 3 ಕೋಟಿ ಹಣ ಖರ್ಚು  ಮಾಡುತ್ತಿದ್ದೇನೆ. ಈ ವರ್ಷ ಸುಮಾರು 72 ಸಾವಿರ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದ್ದೇನೆ. ಇಂಜಿನೀಯರಿಂಗ್ ಮತ್ತು ವೈದ್ಯಕೀಯ ಬಡ ವಿದ್ಯಾಥರ್ಿಗಳಿಗಾಗಿ ರೂ. 36 ಲಕ್ಷ ಕೊಟ್ಟಿದ್ದೇನೆ. ನನ್ನ ಈ ಶಿಕ್ಷಣದ ದಾಸೋಹ ನಿರಂತರವಾಗಿ ನಡೆಯುತ್ತಲೇ ಇದೆ. ಇದರಲ್ಲಿ ನಾನು ಯಾವುದೇ ರೀತಿಯ ವ್ಯತ್ಯಾಸ ಮಾಡುವುದಿಲ್ಲ. ನನಗೆ ಬಡ ಮಕ್ಕಳು ಓದಿ ಸಮಾಜದ ಆಸ್ತಿ ಆಗಬೇಕು ಎಂಬ ಆಸೆ ಇದೆ ಇದರಲ್ಲಿ ಯಾವುದೇ ರೀತಿಯ ರಾಜಕೀಯ ಸ್ವಾರ್ಥ ಇಲ್ಲ ಎಂದರು.

ಈ ಸಮಯದಲ್ಲಿ ಮುಖಂಡರಾದ ನಿಂಗಪ್ಪಗೌಡ ಬಪ್ಪರಗಿ, ಈರಣ್ಣ ಹೊಕ್ರಾಣಿ, ಸಾಹೇಬಗೌಡ ಮಕಾಶಿ, ಗ್ರಾಪಂ ಸದಸ್ಯರಾದ ಬಸವರಾಜ ಕುಂಬಾರ, ಸೋಮಲಿಂಗ ಛಲವಾದಿ, ಶಿವಪ್ಪ ಗೋನಾಳ ಇದ್ದರು 

ಸುದ್ದಿ ಓದಿ