ಮುಂದಗೋಡ

ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ವಿದ್ಯಾರ್ಥಿ ಪತ್ತೆ

ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ವಿದ್ಯಾರ್ಥಿ ಪತ್ತೆ

ಮುಂಡಗೋಡ 30: ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ಮುಂಡಗೋಡ ತಾಲೂಕಿನ ಅಂದಲಗಿ ಗ್ರಾಮದ ವಿದ್ಯಾರ್ಥಿ ಯನ್ನು ಮುಂಡಗೋಡ ಪೋಲಿಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಲೂಕಿನ ಅಂದಲಗಿ ಗ್ರಾಮದ ಪ್ರೀತಂ ಪ್ರಕಾಶ ಪವಾರ (18) ಎಂಬಾತನೇ ಕಾಣೆಯಾಗಿದ್ದ ವಿದ್ಯಾರ್ಥಿ. ಈತನು ಮೇ 21 2024ರಂದು ಒಂದು ವರ್ಷದ ಹಿಂದೆ ಮುಂಡಗೋಡ ಕಾಲೇಜಿನ ಅಡ್ಮಿಶನ್ ಮಾಡಸಲು ಹೋಗಿ ಬರುವುದಾಗಿ ಹೇಳಿ ಹೋದವನು ಬಂದೇ ಇರಲಿಲ್ಲ. ಒಂದು ವರ್ಷದ ನಂತರ ಪತ್ತೆಯಾಗಿದ್ದಾನೆ.ಇಲ್ಲಿನ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

ಉತ್ತರ ಕನ್ನಡ ಜಿಲ್ಲೆಯ ವರಿಷ್ಠಾಧಿಕಾರಿ ಎಂ ನಾರಾಯಣ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಜಗದೀಶ್ ನಾಯ್ಕ್‌, ಶಿರಸಿ ಡಿ ವೈ ಎಸ್ಪಿ ಗೀತಾ ಪಾಟೀಲ್, ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ್ ನಿಲಮ್ಮನವರ ನೇತೃತ್ವದಲ್ಲಿ ಪಿಎಸ್‌ಐ ಪರಶುರಾಮ ಮಿರ್ಜಿಗಿ, ಕ್ರೈಂ ಪಿಎಸ್‌ಐ ವಿನೋದ್ ಎಸ್ ಕೆ , ಹಾಗೂ ಸಿಬ್ಬಂದಿಗಳಾದ ಮಂಜಪ್ಪ ಚಿಂಚಲಿ ಬಸವರಾಜ ಲಂಬಾಣಿ ಸಂಜು ರಾಠೋಡ, ವಿದ್ಯಾರ್ಥಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 


ಸುದ್ದಿ ಓದಿ