ಅಥಿತಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಬಳ್ಳಾರಿ05: ರಾಜ್ಯವ್ಯಾಪಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥಿತಿ ಉಪನ್ಯಾಸಕರು ಕಳೆದ 20 ಕ್ಕೂ ಹೆಚ್ಚು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ, ತೀರ್ಥಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಹರ್ಷ ಶಾನುಭೋಗ ಅವರ ಕರುಣಾಜನಕ ಆತ್ಮಹತ್ಯೆಯ ಘಟನೆ ನಮ್ಮ ಉಪನ್ಯಾಸಕರ ಅತ್ಯಂತ ಕಷ್ಟಮಯ ಜೀವನವನ್ನು ತೋರಿಸುತ್ತದೆ. ಉದ್ಯೋಗದ ಭದ್ರತೆ ಇಲ್ಲದೆ, ಎಷ್ಟೋ ತಿಂಗಳುಗಳ ಕಾಲ ಸಂಬಳವೇ ಇಲ್ಲದೆ ಇಂತಹ ಸಾವಿರಾರು ಅತಿಥಿ ಉಪನ್ಯಾಸಕರು ಅತ್ಯಂತ ಯಾತನಾಮಯ ಜೀವನ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಗುರಳ್ಳಿರಾಜ ಹೇಳಿದರು.
ಇವರಲ್ಲಿ ಎಷ್ಟೋ ಜನ ಉನ್ನತ ಪದವಿ ಪಡೆದವರು, ಓಇಖಿ ಪರೀಕ್ಷೆ ಉತ್ತೀರ್ಣರಾದವರು, ಡಾಕ್ಟರೇಟ್ ಮಾಡಿರುವವರು, ಕಾಲೇಜುಗಳಲ್ಲಿ 10-15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವವರು. ಆದರೆ, ಇವರ ನೋವಿಗೆ ಉತ್ತರವಾಗಲಿ ಅಥವಾ ಗೌರವಯುತ ಬದುಕು ಸಾಗಿಸಲು ಕನಿಷ್ಟ ಭದ್ರತೆ, ಸಂಬಳ ದೊರಕಿಸುವಲ್ಲಿ ಸರ್ಕಾರದ ಕಡೆಯಿಂದ ಸ್ಪಂದನೆಯಾಗಲಿ ದೊರಕದೆ ಇರುವುದು ಅತ್ಯಂತ ಬೇಸರದ ವಿಷಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಈಗ ಅವರುಗಳ ಜೀವನ ಬಿಕ್ಕಟ್ಟಿಗೆ ಬಂದಿದೆ. ಅವರ ಹೋರಾಟವನ್ನು ಬೆಂಬಲಿಸಿ ಅವರೊಟ್ಟಿಗೆ ನಿಲ್ಲುವ ನೈತಿಕ ಜವಾಬ್ದಾರಿ ವಿದ್ಯಾರ್ಥಿಗಳಾದ ನಮ್ಮ ಮೇಲೆ ಇದೆ ಎಂಬ ಆಲೋಚನೆಯೊಂದಿಗೆ ರಾಜ್ಯದ ವಿದ್ಯಾರ್ಥಿಗಳು ಉಪನ್ಯಾಸಕರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದು ತಿಳಿಸಿದರು.
ಇಂದು ಂಋಖಓ ವಿದ್ಯಾರ್ಥಿ ಸಂಘಟನೆ ವತಿಯಂದ ನಗರದ ಮೋತಿ ಸರ್ಕಲ್ನಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಛೇರಿಯನ್ನು ತಲುಪಿ, ಜಿಲ್ಲಾಧಿಕಾರಿ ಕಛೇರಿಯ ಮುಂದೆ ಅಥಿತಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ನೂರಾರು ವಿದ್ಯಾರ್ಥಿಗಳು ಸೇರಿ ಪ್ರತಿಭಟನೆಯನ್ನು ಮಾಡಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ಎಮ್.ಶಾಂತಿ ಅವರು ಮಾತಾನಾಡುತ್ತಾ, ಇಡೀ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಸಂಘವು ಪ್ರಬಲ ಚಳುವಳಿಗೆ ಮುನ್ನುಗ್ಗಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ. ವಿವಿಧ ಹಂತಗಳ ಚಳುವಳಿಗೆ ಕರೆ ನೀಡಿದ್ದಾರೆ. ಇದು ಅವರುಗಳ ವೈಯುಕ್ತಿಕ ಹೋರಾಟಕ್ಕಿಂತ ಹೆಚ್ಚಾಗಿ, ಅಳಿವು-ಉಳಿವಿನ ಸಂಘರ್ಷವಾಗಿದೆ. ಈ ಸಂಘರ್ಷದಲ್ಲಿ ವಿದ್ಯಾರ್ಥಿಗಳು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು, ಐಕ್ಯತೆಯನ್ನು ಸಾರುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಂಋಖಓ ರಾಜ್ಯ ಸಮಿತಿಯು ರಾಜ್ಯವ್ಯಾಪಿ ‘ಅತಿಥಿ ಉಪನ್ಯಾಸಕರ ಹೋರಾಟದೊಂದಿಗೆ ವಿದ್ಯಾರ್ಥಿಗಳಿದ್ದೇವೆ' ಎಂಬ ಘೋಷಣೆಯೊಂದಿಗೆ ಚಳುವಳಿಗೆ ಕರೆ ಕೊಟ್ಟಿದ್ದೇವೆ. ಶಿಕ್ಷಕರು ತರಗತಿ ಬಹಿಷ್ಕರಿಸಿ ಹೋರಾಟದಲ್ಲಿ ಇರುವುದರಿಂದ ಶೈಕ್ಷಣಿಕ ಏರುಪೇರುಗಳು ಉಂಟಾಗಿವೆ. ಈ ಶೈಕ್ಷಣಿಕ ಗೊಂದಲಗಳನ್ನು ಈ ಕೂಡಲೇ ಬಗೆಹರಿಸಬೇಕು ಹಾಗೂ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಂಋಖಓನ ಜಿಲ್ಲಾ ಸಮಿತಿ ಸದಸ್ಯರಾದ ಉಮಾ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಂಋಖಓನ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರುಗಳಾದ ಅನುಪಮ, ರೇವಣಸಿದ್ದೇಶ್ವರ.ಜೆ.ಪಿ ಹಾಗೂ ವೀರೇಶ್, ಎರಿಸ್ವಾಮಿ, ಚೇನ್ನಪ್ಪ, ಅನ್ವರ್ ಬಾಷಾ, ಅವಿನಾಷ್, ಪ್ರಿಯಾಂಕ, ಕುಸುಮ, ಉಮಾಮಹೇಶ್ವರಿ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.