ಮುಂದಗೋಡ

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಲೋಕದರ್ಶನ ವರದಿ  

ಮುಂಡಗೋಡ:ತಾಲೂಕಿನ ಶಿಂಗನಳ್ಳಿ ಗ್ರಾಮದ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಸುಪ್ರೀತ ತೆಳ್ಳಳ್ಳಿ(16) ನೇಣು ಹಾಕಿಕೊಂಡವ. ಈತನು ದುಡುಕಿನ ಸ್ವಭಾವದವನಾಗಿದ್ದು ಸಣ್ಣ-ಪುಟ್ಟ ವಿಷಯಕ್ಕೆ ಸಿಟ್ಟು ಮಾಡಿಕೊಳ್ಳುತ್ತಿದ್ದನು. ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಶುಕ್ರವಾರ ರಾತ್ರಿ 10ಗಂಟೆಯಿಂದ ಶನಿವಾರ ಬೆಳಗ್ಗೆ 6ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಮನೆಯ ಹಿತ್ತಲಿನಲ್ಲಿ ಇರುವ ಮಾವಿನ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ನನ್ನ ಮಗನ ಮರಣದಲ್ಲಿ ಬೇರೆ ಯಾವುದೆ ಸಂಶಯ ಇರುವುದಿಲ್ಲ ಎಂದು ಎಂದು ಮೃತನ ತಂದೆ ಫಕ್ಕೀರ​‍್ಪ ತೆಳ್ಳಳ್ಳಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 


ಸುದ್ದಿ ಓದಿ