ವಿಜಯಪುರ

ವಿದ್ಯಾರ್ಥಿನಿ ಸಹನಾ ಕಾಖಂಡಕಿಗೆ ಸನ್ಮಾನ

ವಿದ್ಯಾರ್ಥಿನಿ ಸಹನಾ ಕಾಖಂಡಕಿಗೆ ಸನ್ಮಾನ

ಕೊಲ್ಹಾರ 17: ಬೆಂಗಳೂರಿನಲ್ಲಿ ನಡೆದ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪಟ್ಟಣದ ವಿದ್ಯಾರ್ಥಿನಿ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 590 ಅಂಕ ಗಳಿಸಿದ ಸಾಧನೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸನ್ಮಾನಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮೆನ್ನಬೆತ್ತು ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸ್ಥಳೀಯ ಕಲ್ಲಪ್ಪ ಗುರಲಿಂಗಪ್ಪ ಕಾಖಂಡಕಿ ಅವರ ಪುತ್ರಿ ಸಹನಾ ಅವರು, ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಪಿಯುಸಿ ಕಾಲೇಜುಗಳಲ್ಲಿಯೇ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಟಾಪ್ ಐದು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 

ಈ ಸಾಧನೆಗಾಗಿ ಅವರಿಗೆ ಮೂರು ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಎಚ್‌.ಸಿ. ಮಹಾದೇವಪ್ಪ, ಕೆ.ಹೆಚ್‌. ಮುನಿಯಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಕೊಲ್ಹಾರ ಪಟ್ಟಣದ 1997-98 ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗ ವಿಧ್ಯಾರ್ಥಿನಿ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದರು. 


ಸುದ್ದಿ ಓದಿ