ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ
ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸಾಗಿದ್ದು, ಈ ನಿಟ್ಟಿನಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದೇನೆ. ಸಮಗ್ರ ನೀರಾವರಿ, ಉತ್ತಮ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಕೊರತೆ ನಿವಾರಣೆ ಜೊತೆಗೆ ಕೆರೆಗಳನ್ನು ತುಂಬುವ ಕಾರ್ಯಕ್ಕೆ ವಿಶೇಷ ಕಾಳಜಿ ವಹಿಸಿ ಶಕ್ತಿಮೀರಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆಂದು ಆಹಾರ ಮತ್ತು ನಾಗರಿಕ ನಿಗಮದ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ತಾಲೂಕಿನ ಬಳಗಾನೂರ ಹಾಗೂ ಮಿಣಜಗಿ ಗ್ರಾಮಗಳಲ್ಲಿ ಕೆಬಿಜೆಎನ್ಎಲ್ ಇಲಾಖೆ ರೂ. 2 ಕೋಟಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಗಾನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ನಂತರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
ಮತಕ್ಷೇತ್ರದ 120 ಗ್ರಾಮಗಳಿಗೂ ಕನಿಷ್ಟ ಪ್ರತಿ ಗ್ರಾಮಕ್ಕೆ 1 ರಿಂದ 2 ಕೋಟಿ ಅನುದಾನ ಕೊಟ್ಟಿದ್ದೇನೆ. ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಈ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದ್ದೇನೆ. ರೈತರ ಅತಿ ಅಗತ್ಯವಾದ ನೀರಾವರಿ ಯೋಜನೆಗೆ ಒತ್ತುಕೊಡಲಾಗಿದೆ. ಆಲಮಟ್ಟಿ ಡ್ಯಾಂ ಎತ್ತರಕ್ಕೇರಿದ ನಂತರ ಈ ಭಾಗ ಸಮಗ್ರ ನೀರಾವರಿಗೆ ಒಳಪಡಲಿದೆ. ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಸುಮಾರು 254 ಹೊಸ ಶಾಲಾ ಕಟ್ಟಡಗಳನ್ನು ನಿಮರ್ಿಸಲಾಗಿದೆ.
ರೈತರಿಗೆ ಕನಿಷ್ಟ 12 ತಾಸು ವಿದ್ಯುತ್ ಕೊಡಲು ವಿದ್ಯುತ್ ಸ್ಟೇಶನ್ಗಳನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ ರೂ. 1350 ಕೋಟಿ ಅನುದಾನ ತಂದಿದ್ದೇನೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ಜಗತ್ತಿನ ಅತ್ಯಂತ ಸಮರ್ಥ ನಾಯಕರಾಗಿದ್ದಾರೆ. ಅವರು ಕೊರೊನಾ ನಿರ್ವಹಿಸಿದ ರೀತಿಯನ್ನು ಇಡೀ ಜಗತ್ತೇ ಪ್ರಶಂಸಿದೆ. ಮಿಣಜಗಿ ಹಾಗೂ ಬಳಗಾನೂರ ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕೊಡಲಿದ್ದೇನೆ. ಬಳಗಾನೂರ ಗ್ರಾಮಕ್ಕೆ ಪ್ರೌಢಶಾಲೆಯ ಬೇಡಿಕೆ ಇದ್ದು ಪ್ರಸ್ತಾವನೆ ಸರಕಾರಕ್ಕೆ ಕಳಿಸಿದ್ದೇನೆ ಆದಷ್ಟು ಬೇಗ ಮಂಜೂರು ಮಾಡಿಸಲಾಗುವುದು ಎಂದ ಅವರು ನಾನು ಜನನಾಯಕನಾಗಿ ಕೆಲಸ ಮಾಡಲು ಎಂದೂ ಬಯಸಿಲ್ಲ. ನಾನು ನಿಮ್ಮ ಸೇವಕನಾಗಿ ಕೆಲಸ ಮಾಡಲು ಬಯಸುತ್ತೇನೆ. ನನಗೆ ಮುಂದೆಯೂ ನಿಮ್ಮೆಲ್ಲರ ಆಶೀವರ್ಾದ ಬೇಕು ಎಂದರು.
ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಬಸನಗೌಡ ವಣಿಕ್ಯಾಳ, ಮುಖಂಡ ರಾಮನಗೌಡ ಡೋರನಳ್ಳಿ, ದ್ಯಾಮನಗೌಡ ಪಾಟೀಲ, ಚಂದ್ರಶೇಖರ ಅಲದಿ, ತಾಪಂ ಮಾಜಿ ಉಪಾಧ್ಯಕ್ಷ ರಾಮನಗೌಡ ಬಿರಾದಾರ (ಮಿಣಜಗಿ), ಗ್ರಾಪಂ ಸದಸ್ಯ ಪ್ರಭು ಪತ್ತೇಪೂರ, ರಮೇಶ ಪೀರಾಪೂರ, ಶಿವು ನಾಯಕ (ಮಿಣಜಗಿ), ಬಸನಗೌಡ ಪಾಟೀಲ (ವಣಿಕ್ಯಾಳ), ಪಿಡಿಓ ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಶಿವಲೀಲಾ ಮದರಿಮಠ, ಉಪಾಧ್ಯಕ್ಷ ಮುತ್ತು ಮನಹಳ್ಳಿ, ಸಿಆರ್ಸಿ ಬಾಲಾಜಿ ವಿಜಾಪೂರ, ತಾ.ಪ್ರಾ.ಶಾ.ಶಿ.ಸಂ. ಅಧ್ಯಕ್ಷ ಬಿ.ಟಿ. ವಜ್ಜಲ್, ಎಚ್.ಎಂ. ಆರ್.ಎಂ. ಮುರಾಳ, ಬಿ.ಆಯ್. ಸಜ್ಜನ, ಪಿಡಿಓ ಬಿ.ಎಂ. ಸಾಗರ, ಎಇಇ ಎನ್.ಡಿ. ಮಸೂತಿ, ಇದ್ದರು