ಶೈಕ್ಷಣಿಕ ಪ್ರಗತಿಗೆ ಶ್ರಮಿಸಿರಿ: ಬಿಇಓ ಬಸವರಾಜ
ಲೋಕದರ್ಶನ ವರದಿ
ಹೂವಿನ ಹಡಗಲಿ 11: ಪ್ರಸಕ್ತ ಸಾಲಿನ 6-10 ಭೌತಿಕ ತರಗತಿಗಳು ಪ್ರಾರಂಭವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾಮಟ್ಟ ಸುಧಾರಿಸಲು ಮುಖ್ಯ ಗುರುಗಳು ಕ್ರಮಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ ಹೇಳಿದರು.
ಪಟ್ಟಣದ ಜಿಪಿಜಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಶೈಕ್ಷಣಿಕ ಸಭೆಯಲ್ಲಿ ಅವರು ಮಾತನಾಡಿದರು. ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿನ ಯೋಜನೆ 1 ಮತ್ತು 2 ರಲ್ಲಿ ನಿರ್ವಹಿಸಿದ ಕಾರ್ಯಗಳನ್ನು ಮುಖ್ಯ ಗುರುಗಳು ಪರೀಶೀಲಿಸಿಬೇಕು. ದಾಖಲಾಗುವ ಪ್ರತಿ ವಿದ್ಯಾರ್ಥಿಯ ವಿವರಗಳನ್ನು ಎಸ್ ಎ ಟಿ ಎಸ್ ತಂತ್ರಾಂಶದಲ್ಲಿ ಸರಿಪಡಿಸಬೇಕು.ನಿಷ್ಠಾ ಶೈಕ್ಷಣಿಕ ತರಬೇತಿಯ ಎಲ್ಲಾ ಕೋರ್ಸ್ ಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ನವೆಂಬರ್ ತಿಂಗಳಲ್ಲಿ ಅಕ್ಷರ ದಾಸೋಹ ಬಿಸಿಯೂಟ ಪ್ರಾರಂಭವಾಗಬಹುದು ಸೂಕ್ತ ಸಿದ್ಧತೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಹೆಚ್ ಕೆ ಚಂದ್ರ್ಪ ಶಿಕ್ಷಣಾಧಿಕಾರಿಗಳ ಸಂಘ ಸಂಘಟನೆ ಕುರಿತು ಮಾಹಿತಿ ನೀಡಿದರು.ತಾಲೂಕು ದೈಹಿಕ ಪರೀವೀಕ್ಷಕ ಮುಸ್ತಫಾ ಎಸ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಿಟ್ಯಾನಾಯ್ಕ್, ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಪಿ ಪ್ರಕಾಶ್ ಉಪಾಧ್ಯಕ್ಷರಾದ ಸರ್ವಮಂಗಳ ಉಪಪ್ರಾಚಾರ್ಯ ಎ ಕೋಟೆಪ್ಪ ಉಪಸ್ಥಿತರಿದ್ದರು.ಇ ಸಿ ಓ ಮಲ್ಲಿಕಾರ್ಜುನ ನಿರ್ವಹಿಸಿದರು.ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ಶಾಲೆಗಳ ಮುಖ್ಯ ಗುರುಗಳು ಹಾಜರಿದ್ದರು