ಮಳೆ ನೀರು ಸಂಗ್ರಹಣೆ ಕುರಿತು ಬಿದಿ ನಾಟಕ
ಬಳ್ಳಾರಿ 13: ನೆಹರು ಯುವ ಕೇಂದ್ರ, ಗದಗ ಮತು ಬಿಂದು ಕಲಾ ತಂಡ, ಇವರ ಸಂಯುಕ್ತ ಆಶ್ರಯದಲ್ಲಿ ಹುಯಿಲ್ಗೋಳ ಗ್ರಾಮದಲ್ಲಿ ಮಳೆ ನೀರು ಸಂಗ್ರಹಣೆಯ ಬೀದಿ ನಾಟಕವನ್ನು ಮಾಡಲಾಯಿತು.
ನಾಟಕಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸುದೇವ ಪೂಜಾರ್ ಚಾಲನೆ ನೀಡಿ, ಜನರು ನೀರು ಸಂರಕ್ಷಣೆಯಲ್ಲಿ ಪ್ರಾಮುಖ್ಯತೆಯನ್ನು ನೀಡಬೇಕು ಜೊತೆಗೆ ಮಳೆ ನೀರನ್ನು ಬಳಕೆ ಮಾಡಬೇಕೆಂದು ತಿಳಿಸಿದರು ಹಾಗೂ ಬಿಂದು ಕಲಾ ತಂಡವು ಬೀದಿ ನಾಟಕದ ಮೂಲಕ ಜನರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಜಾಗೃತಿ ಕಾರ್ಯಕ್ರಮದಲ್ಲಿ ಕಾಶಮ್ಮ ಭಜಂತ್ರಿ, ನಿಂಗಮ್ಮ ತಳವಾರ, ಶರಣಪ್ಪ ಯಡಿಪೂರ ಇದ್ದರು.