ತಂಬಾಕು ಸೇವನೆ ಬಿಡಬೇಕು ಜೀವನ ಆಯ್ದುಕೊಳ್ಳಬೇಕು: ಪ್ರವೀಣ ಕಟ್ಟಿ
ಮುಂಡಗೋಡ:ತಂಬಾಕು ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶ ಸಂಬಂಧ ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ತಂಬಾಕು ಸೇವನೆ ಬಿಡಬೇಕು ಜೀವನ ಆಯ್ದುಕೊಳ್ಳಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕಟ್ಟಿ ಹೇಳಿದರು.
ತಂಬಾಕು ಮಾರಾಟ ಮಾಡದಂತೆ ಮನಪರಿವರ್ತನೆ ಮಾಡುವ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಡೆದ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ತಂಬಾಕು ಸೇವನೆ ನಿಯಂತ್ರಣ ಕುರಿತು ತಂಬಾಕು ಮಾರಾಟ ಮಾಡುವ ಅಂಗಡಿಕಾರರಿಗೆ ಮತ್ತು ಸೇವನೆ ಮಾಡುವವರಿಗೆ ಶಾಲಾ ವಿದ್ಯಾರ್ಥಿಗಳು ಈ ವೇಳೆ ಗುಲಾಬಿ ಹೂವು ನೀಡುವುದರ ಮೂಲಕ ಕೋಟ್ಪಾ-2003 ಕಾಯ್ದೆ ಬಗ್ಗೆ ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಎಸ್.ಎಸ್.ಸಿಮಾನಿ, ರೋಟರಿ ಕ್ಲಬ್ನ ಅಧ್ಯಕ್ಷ ಬೈಜು ವಿ.ಜೆ., ಕಾರ್ಯದರ್ಶಿ ಎಸ್.ಕೆ.ಬೋರಕರ, ತೇರಾ ಹೀ ಸಹಾರಾ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷೆ ಸಲ್ಮಾ ಶೇರಖಾನೆ, ಪ.ಪಂ.ಮುಖ್ಯಾಧಿಕಾರಿ ಎಮ್.ವಿ.ಹಿರೇಮಠ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ ಎಚ್.ಆರ್., ಸ.ಪ.ಪೂ.ಕಾಲೇಜ್ ಮುಖ್ಯ ಶಿಕ್ಷಕ ಪರಶುರಾಮ ಸಿ.ಕೆ., ಆಡಳಿತ ವೈದ್ಯಾಧಿಕಾರಿ ಡಾ.ಭರತ ಡಿ.ಟಿ., ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ, ತಾಲೂಕಾ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ನಾಗಯ್ಯ ಹಿರೇಮಠ, ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಅಶೋಕ, ಪ್ರಸಾದ ಎ., ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮರಿಯಮ್ಮ, ಕ್ರೀಡಾ ಅಧಿಕಾರಿ ಹನುಮಂತ, ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.