ಪ್ರಚಾರ ವೇಳೆ ಕಲ್ಲು ತೂರಾಟ: ಮಹಿಳೆಗೆ ಗಾಯ
ಮುದ್ದೇಬಿಹಾಳ: ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಚುನಾವಣಾ ಪ್ರಚಾರ ವೇಳೆ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿದ ಪರಿಣಾಮ ಶಾಂತಾ ಇಂಡಿ ಎನ್ನುವ ಮಹಿಳೆಗೆ ಕಲ್ಲು ಬಡೆದು ತಲೆಗೆ ಗಂಭೀರ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಘಟನೆ: ದಿ.4 ಗುರುವಾರದಂದು ಸಂಜೆ 8 ಗಂಟೆ ಸುಮಾರಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡರವರು ತಾಲೂಕಿನ ಗೋನಾಳ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಬಳಿ ವಿಶಾಲ ಮೈದಾನದಲ್ಲಿ ವಿಧಾನ ಸಭಾ ಚುನಾವಣಾ ನಿಮಿತ್ಯ ನೂರಾರು ಕಾರ್ಯಕರ್ತರೊಂದಿಗೆ ತೆರಳಿ ಭಾರಿ ಪ್ರಮಾಣದಲ್ಲಿ ಸೇರಿದ ಗ್ರಾಮಸ್ಥರನ್ನುದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು ಇದಕ್ಕೂ ಮೊದಲು ಮೂರಾ್ನಲ್ಕು ಕಲ್ಲುಗಳು ಬೇರೆ ಬೇರೆ ಕಡೆಯಿಂದ ತೂರಿ ಬಂದು ಗಾಭರಿಗೊಳ್ಳುವಂತೆ ಮಾಡಿತ್ತು. ಆದರೂ ಸಹಿತ ಇದೇನು ಸಾಮಾನ್ಯವೆಂದು ಭಾವಿಸಿ ಸಿ ಎಸ್ ನಾಡಗೌಡರು ಚುನಾವಣಾ ಭಾಷಣ ಪ್ರಾರಂಭಿಸಿದರು.
ದೊಡ್ಡದಾದ ಕಲ್ಲೋಂದು ನಾಡಗೌಡರ ತಲೆ ಹಿಂಬಾಗದಿಂದ ತೂರಿ ಬಂದು ಮುಂದೆ ಕುಳಿತಿದ್ದ ಮಹಿಳೆ ಶಾಂತಾ ಇಂಡಿ ಎನ್ನುವ ಮಹಿಳೆಗೆ ಜೋರಾಗಿ ಬಂದು ಬಡಿದಿದೆ ಇದನ್ನು ಗಮನಿಸಿದ ನಾಡಗೌಡರು ಹಾಗೂ ಅಲ್ಲಿನ ಗ್ರಾಮಸ್ಥರು ಗಾಭರಿಗೊಂಡು ಮಹಿಳೆಯತ್ತ ತಿರುಗಿ ನೋಡಿದ್ದಾರೆ. ಆಗಾಗಲೇ ಜೋರಾಗಿ ಬಂದು ಬಡಿದ ಕಲ್ಲಿನಿಂದ ತಲೆ ಬಲಭಾಗದಲ್ಲಿ ಗಾಯಗೊಂಡು ವಿಪರೀತ ರಕ್ತ ಸ್ರಾವದಿಂದ ಕುಸಿದ ಬಿದ್ದ ಮಹಿಳೆಯನ್ನು ಕಂಡು ಅಂಬ್ಯೂಲೇನ್ಸ್ ಮೂಲಕ ತಕ್ಷಣದಲ್ಲಿಯೇ ಮುದ್ದೇಬಿಹಾಳ ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಗಾಯಗೊಂಡಿದ್ದ ಶಂತಾ ಇಂಡಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಶಾಂತಾ ಇಂಡಿಯವರ ಪುತ್ರ ಬಸವರಾಜ ಇಂಡಿ ಇತನು ತನ್ನ ತಾಯಿಗಾದ ಘಟನೆ ಕುರಿತು ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಸೋಮನಗೌಡ ನಾಗಪ್ಪ ಬಿರಾದಾರ(ಕವಡಿಮಟ್ಟಿ) ಬಸವರಾಜ ರಾಮಣ್ಣ ಗುಳಬಾಳ, ಬೀಯಪ್ಪ ಶಿವಪ್ಪ ಗುಳಬಾಳ, ಬೀರ್ಪ ಯಮುನಪ್ಪ ಗುಳಬಾಳ, ಮಹಾಂತೇಶ ಶಿವಪ್ಪ ಗುಳಬಾಳ, ಮಲ್ಲಪ್ಪ ರಾಮಣ್ಣ ಗುಳಬಾಳ, ದೇವೇಂದ್ರ ಶಿವಪ್ಪ ಗುಳಬಾಳ, ಹಾಗೂ ಸ್ಥಳಿಯ ಶಾಶಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಸೇರಿದಂತೆ ಒಟ್ಟು ಎಂಟು ಜನರ ಮೇಲೆ ಪ್ರಕರಣ ದಾಖಲಿಸಿದ್ದು ಘಟನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಪೋಲಿಸ್ ತನಿಖೆ ಕೈಗೊಂಡಿದ್ದಾರೆ. ತಾಲೂಕಿನ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿದ ಪರಿಣಾಮ ಶಾಂತಾ ಇಂಡಿ ಎನ್ನುವ ಮಹಿಳೆಗೆ ಕಲ್ಲು ಬಡೆದು ತಲೆಗೆ ಗಂಭೀರ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದು.