ರಾಜ್ಯಮಟ್ಟದ ಫೇಸ್ಬುಕ್ ಲೈವ್ ಸಮಾವೇಶ
ಬಳ್ಳಾರಿ 03: ನಾಲ್ಕು ವರ್ಷದ ಪದವಿ ಕೋರ್ಸ್ ಹೇರಿಕೆಯ ವಿರುದ್ಧ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ ದಿ. 04ರಂದು ಸಂಜೆ 4ಗಂಟೆಗೆ ರಾಜ್ಯಮಟ್ಟದ ಫೇಸ್ಬುಕ್ ಲೈವ್ ಸಮಾವೇಶ ಜರುಗಲಿದೆ.
ಈ ಕಾರ್ಯಕ್ರಮ ಖಚಿತಜ ಇಜಣಛಿಚಿಣಠ ಅಠಟಣಣಜಜ-ಏಚಿಡಿಟಿಚಿಣಚಿಞಚಿ ಫೇಸ್ಬುಕ್ ಪೇಜ್ನಿಂದ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪ್ರೊ. ಮುರಿಗೆಪ್ಪ, ಖ್ಯಾತ ಶಿಕ್ಷಣ ತಜ್ಞ ಪ್ರೊ.ಮಹಾಬಲೇಶ್ವರ ರಾವ್, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಕೇಂದ್ರ ಪ್ರಧಾನ ಕಾರ್ಯದರ್ಶಿ ಅನಿಸ್ ರಾಯ್ ಮತ್ತು ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಭಾಗವಹಿಸಲಿದ್ದಾರೆ. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಸೆಕ್ರೆಟರಿಯಟ್ ಸದಸ್ಯ ವಿ.ಎನ್. ರಾಜಶೇಖರ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ವಿಷಯ ಮಂಡನೆಯನ್ನು ಉಪನ್ಯಾಸಕ ಸೋಮಶೇಖರ ಗೌಡರವರು ನಡೆಸಿಕೊಡಲಿದ್ದಾರೆ.