ಷದ್ಮವೇಷ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಶಿಗ್ಗಾವಿ 28 : ಇತ್ತೀಚಿಗೆ ಹಾವೇರಿಯ ಗುರುಭವನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಂಸ್ಕೃತಿಕ ಸ್ಪರ್ಧೆಗಳಲ್ಲಿ ಶಿಗ್ಗಾವಿ ತಾಲೂಕಿನ ನೀರಲಗಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕು. ಸೋಮಶೇಖರ್ ಹಡಪದ ಶದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಹಾಗೂ ಕು.ಅರ್ಿತಾ ಮುದ್ದನಗೌಡ್ರ ವಿದ್ಯಾರ್ಥಿನಿಯು ಇಂಗ್ಲೀಷ ಭಾಷಣದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆಯನ್ನು ಈ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕ ಎಸ್ ಐ ಮಡಿವಾಳರ ಹಾಗೂ ಗುರುರಾಜ ಹುಚ್ಚಣ್ಣವರ ಶಿಕ್ಷಕರು ಮಾರ್ಗದರ್ಶನವನ್ನು ಮಾಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ತಾಲೂಕ ಶಿಕ್ಷಣಾಧಿಕಾರಿಗಳಾದ ಎಂ ಬಿ ಅಂಬಿಗೇರ್ ಶಿಕ್ಷಣ ಸಂಯೋಜಕ ಉಮೇಶ್ ಮಾಳಗಿ, ಶಿಕ್ಷಕ ಕುಮಾರ ಹುಲಗೂರು ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ನಿರಲಗಿ, ಕಡಹಳ್ಳಿ ಗ್ರಾಮಗಳ ವಿವಿಧ ಮುಖಂಡರು ಜೊತೆಗೆ ಎಸ್ಡಿಎಂಸಿಯ ಸದಸ್ಯರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.