ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಮುಂಡರಗಿ 03: ಪಟ್ಟಣದ ವಿ.ಜಿ.ಲಿಂಬಿಕಾಯಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಪೂರ್ಣಿಮಾ.ಸಿ.ಗಣಪ್ಪನವರ ಪ್ರೌಢಶಾಲೆ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇದೇ ಶಾಲೆಯ ವಿದ್ಯಾರ್ಥಿನಿ ವೀಣಾ ಚೌಡಾಳ ದ್ವಿತಿಯ ಸ್ಥಾನ ಪಡೆದಿದ್ದಾಳೆ.
ಗದಗ ಕೆ.ಎಚ್.ಪಾಟೀಲ ಒಳಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅ. 7ರಂದು ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಕ್ಕಮಹಾದೇವಿ ಕಡ್ಡಿ, ಗೌ.ಕಾರ್ಯದರ್ಶಿ ಕೊಟ್ರೇಶ ಅಂಗಡಿ, ಸದಸ್ಯರಾದ ಜೆ.ಎಸ್.ಅಳವಂಡಿ, ಎಸ್.ವೈ.ನಾಡಗೌಡ್ರ. ಪ್ರೌಢಶಾಲೆ ಪ್ರಗು ಎಂ.ಬಿ.ನಾಗರಹಳ್ಳಿ, ಪ್ರಾಥಮಿಕ ಶಾಲೆ ಪ್ರಗು ಸಿ.ವಿ.ಪಾಟೀಲ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.