ಮುಂದಗೋಡ

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

ಮುಂಡಗೋಡ 08: ಇತ್ತೀಚೆಗೆ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.       

200ಮೀ. ಓಟದಲ್ಲಿ ಸುಶ್ಮಿತಾ ಸಿದ್ದಿ ದ್ವಿತೀಯ ಸ್ಥಾನ, 400ಮೀ. ಓಟದಲ್ಲಿ ಶಾಹಿಲ್ ಜಂಗಳೇ ಪ್ರಥಮ, ಅಕ್ಕಮ್ಮ ಕೋಕರೆ 400ಮೀ. ಓಟದಲ್ಲಿ ಹಾಗೂ 4*100ಮೀ. ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಹೆಸರು ತಂದಿದ್ದು ಶಾಲೆಯ ಉಪಪ್ರಾಂಶುಪಾಲ, ಎಸ್‌ಡಿಎಮ್‌ಸಿ ಮತ್ತು ಶಿಕ್ಷಕರು ಇವರಿಗೆ ಅಭಿನಂದಿಸಿದ್ದಾರೆ. 


ಸುದ್ದಿ ಓದಿ