ಬೈಲಹೊಂಗಲ

ನ. 11ರಿಂದ ರಾಜ್ಯಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿ

ನ. 11ರಿಂದ ರಾಜ್ಯಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿ

ಲೋಕದರ್ಶನ ವರದಿ 

ಬೈಲಹೊಂಗಲ 03: ರಾಜ್ಯಮಟ್ಟದ ಮುಕ್ತ ಟೆನಿಸ್ ಪಂದ್ಯಾವಳಿಯನ್ನು ಬೈಲಹೊಂಗಲ ಟೆನಿಸ್ ಅಸೋಸಿಯೇಶನ ಆಶ್ರಯದಲ್ಲಿ ನವಂಬರ 11,12,13ರಂದು ಪಟ್ಟಣದ ಹೊಸೂರ ರಸ್ತೆಯ ವಿಜಯ ಸೊಶೀಯಲ್ ಕ್ಲಬ್ ಆವರಣದ ಮೈದಾನದಲ್ಲಿ ಅದ್ದೂರಿಯಾಗಿ ಜರುಗಲಿವೆ ಎಂದು ಅಸೋಸಿಯೇಶನ ಅಧ್ಯಕ್ಷ ಗಂಗಾಧರ ರಾಮಣ್ಣವರ, ಉದ್ಯಮಿ ವಿಜಯ ಮೆಟಗುಡ್ಡ ಜಂಟಿಯಾಗಿ ಹೇಳಿದರು. 

   ಪಟ್ಟಣದ ಹೊಸೂರ ರಸ್ತೆಯ ವಿಜಯ ಸೊಶೀಯಲ್ ಕ್ಲಬ್ ಟೆನಿಸ್ ಮೈದಾನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಟೆನಿಸ್ ಪಂದ್ಯಾವಳಿಗಳು ಹೊನಲು ಬೆಳಕಿನ ಪಂದ್ಯಗಳಾಗಿದ್ದು ಇಲ್ಲಿ ನಡೆಯುವ ರಾಜ್ಯಮಟ್ಟದ ಟೆನಿಸ್ ಪಂದ್ಯಾವಳಿ ​‍್ರ​‍್ರಥಮವಾಗಿ ಜರುಗುತ್ತಿದೆ.  

ಈ ಪಂದ್ಯಾವಳಿಯಲ್ಲಿ ಬೆಳಗಾವಿ, ಬೀದರ್, ಗೋಕಾಕ, ದಾವಣಗೆರೆ, ಬೆಂಗಳೂರು, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ಕೊಪ್ಪಳ, ಲಿಂಗಸಗೂರು ಅಲ್ಲದೇ ರಾಜ್ಯದ  ವಿವಿಧ ಭಾಗಗಳಿಂದ ಮತ್ತು ಅಂತರಾಜ್ಯಗಳಾದ ಮಹಾರಾಷ್ರ್ಟ, ಗೋವಾ ಟೆನಿಸ್ ಆಟಗರಾರರು ಆಗಮಿಸುತ್ತಿದ್ದು ಸುಮಾರು 400 ಟೆನಿಸ್ ಆಟಗಾರರು ಭಾಗವಹಿಸುವ ನೀರೀಕ್ಷೆ ಇದೆ ಎಂದರು. 

     ರಾಜ್ಯಮಟ್ಟದ ಟೆನಿಸ್ ಪಂದ್ಯಾವಳಿಗೆ ಮೈದಾನಗಳು ಸಿದ್ಧತೆಗೊಂಡಿದ್ದು, ಹೊಸೂರ ರಸ್ತೆಯ ವಿಜಯ ಸೋಶಿಯಲ್ ಕ್ಲಬಿನ ಟೆನಿಸ್ ಮೈದಾನದಲ್ಲಿ ಎರಡು ಟೆನಿಸ್ ಕೋಟ್‌ಗಳು ಮತ್ತು ಮುರಗೋಡ ರಸ್ತೆಯಲ್ಲಿರುವ ಕಲ್ಪವೃಕ್ಷ ಮಾಡೆಲ್ ಸ್ಕೂಲನಲ್ಲಿ ಎರಡು ಅಂತರಾಷ್ಟ್ರೀಯ ಮಾದರಿಯಲ್ಲಿ ಟೆನಿಸ್ ಮೈದಾನಗಳನ್ನು ಸಜ್ಜುಗೊಳಿಸಲಾಗಿದೆ ಕ್ರೀಡಾಪಟುಗಳಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.  

  ಮುಕ್ತ  ಟೆನಿಸ್ ಪಂದ್ಯಾವಳಿಯಲ್ಲಿ 35 ರಿಂದ 45 60 ವಯೋಮಿತಿಯ ಆಟಗಾರರಲ್ಲದೇ ಯುವ ಆಟಗಾರರು ಭಾಗವಹಿಸುತ್ತಿರುವುದು ವಿಶೇಷವಾಗಿದೆ ಹಾಗೂ ಪಂದ್ಯಾವಳಿಗಳ ವೀಕ್ಷಣೆಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.  

   ಡಾ.ಮಹಾಂತೇಶ ಗದಗ, ನಾಗರಾಜ ಮಹಾಂತಶೆಟ್ಟಿ, ಶಿವಯೋಗಿ ಹರಕುಣಿ ಮಾತನಾಡಿ, ಬೈಲಹೊಂಗಲ ಟೆನಿಸ್ ಕೋಟ್ ಗೆ ನೂರು ವರುಷಗಳ ಇತಿಹಾಸವಿದ್ದು ಇಲ್ಲಿ ಪ್ರಸಿದ್ಧ ಟೆನಿಸ್ ಆಟಗಾರರಿದ್ದು ರಾಜ್ಯದ ವಿವಿಧ ಭಾಗಗಳ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಟೆನಿಸ್ ಪಂದ್ಯಾವಳಿಯಿಂದ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶವಾಗಿದ್ದು ಯುವ ಆಟಗಾರರು ಟೆನಿಸ್ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಯುವ ಕ್ರೀಡಾ ಪಟುಗಳಿಗೆ ಕರೆಕೊಟ್ಟರು.  

   ಟೆನಿಸ್ ಪಟುಗಳಾದ ಉಳವಪ್ಪ ಸಾತೇನಹಳ್ಳಿ, ಮಹೇಶ ತಿಗಡಿ, ರವಿ ತುರಮರಿ, ಎಂ.ಬಿ.ಹಿರೇಮಠ, ಸುನೀಲ ತುಳಜನ್ನವರ, ವಿನಯ ಬೋಳನ್ನವರ, ಆನಂದ ಹಿರೇಮಠ, ಶಂಭೂ ಹೂಲಿ, ಡಾ.ತೌಸೀಪ ಸಂಗೊಳ್ಳಿ, ವಿನಯ ಪರೀಟ, ಸಾಗರ ಯರಗಟ್ಟಿ, ರಾಜು ಬಡ್ಲಿ, ರವಿರಾಜ ಇನಾಮದಾರ, ಸಂತೋಷ ಕುಡಸೋಮನ್ನವರ, ಯುವ ಕ್ರೀಡಾಪಟುಗಳಾದ ಪ್ರಥಮ ತುರಮರಿ, ಪ್ರೀತಂ ಬೆಳಗಾವಿ, ಸಮೀರ ಮಕಾನದಾರ ಉಪಸ್ಥಿತರಿದ್ದರು. 


ಸುದ್ದಿ ಓದಿ