ಪಂಚಮಸಾಲಿ ನೌಕರರ ಸಂಘದ ರಾಜ್ಯ ಸರ್ವಸದಸ್ಯರ ಸಭೆ ಯಶಸ್ವಿ
ಚಿತ್ರದುರ್ಗ 18: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸರ್ವಸದಸ್ಯರ ಸಭೆಯು ಇತ್ತೀಚಿಗೆ ಸೀಬಾರ ಬಳಿಯ ರಾಷ್ಟ್ರೀಯ ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು (ನಿವೃತ್ತ), ಹೆಚ್ಚುವರಿ ವಿಚಾರಣಾ ನೋಂದಣಾಧಿಕಾರಿಗಳು, ಲೋಕಾಯುಕ್ತ ಕಚೇರಿ, ಬೆಂಗಳೂರು. ಎ. ಜಿ. ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ರಾಜ್ಯಾಧ್ಯಕ್ಷ ಶ್ರೀ ರವಿ ಉತ್ತಂಗಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ನೌಕರರ ಬ್ಯಾಂಕಿನ ಅಧ್ಯಕ್ಷ ವೀರಣ್ಣ, ರಾಜ್ಯ ಕಾರ್ಯಾಧ್ಯಕ್ಷ ದೇವೇಂದ್ರ ಮೇಟಿ, ಪಂಚಮಸಾಲಿ ಪೋಷಕ ಸಂಘದ ಜಿಲ್ಲಾಧ್ಯಕ್ಷ ಶ್ರೀ ಶಿವಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಶ್ರೀ ಧನಶಂಕರ್, ತಾಲೂಕು ಅಧ್ಯಕ್ಷ ಬಸವರಾಜ್ ಹಾಗೂ ಸಮಾಜದ ಮುಖಂಡ ಶ್ರೀ ಗುತ್ತಿನಾಡು ಪ್ರಕಾಶ್ ಉಪಸ್ಥಿತರಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಸಿ. ನಾಗರಾಜ್, “ಸಂಘಟನೆಯನ್ನು ರಾಜ್ಯಾದ್ಯಂತ ಬಲಪಡಿಸುವುದರೊಂದಿಗೆ ನೌಕರರು ಸಮುದಾಯದ ಬೇರುಗಳಾಗಿ ಕಾರ್ಯನಿರ್ವಹಿಸಬೇಕು.
ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಾಮಾಣಿಕ ಸೇವೆಯ ಮೂಲಕ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರಲು ಶ್ರಮಿಸಬೇಕು” ಎಂದರು.ಕೋಶಾಧ್ಯಕ್ಷ ಎಸ್. ಮಲ್ಲಿನಾಥ್ ಸಂಘದ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಸಭೆಯಲ್ಲಿ ಬೈಲಾ ತಿದ್ದುಪಡಿ ಕುರಿತು ಚರ್ಚಿಸಿ, ತಿದ್ದುಪಡಿ ಸಮಿತಿಯ ಅಧ್ಯಕ್ಷರಾಗಿ ಚಂದ್ರಶೇಖರ್ ಬದಾಮಿ ದಾವಣಗೆರೆ, ಅವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷೀಯ ನುಡಿಗಳನ್ನಾಡಿದ ರವಿ ಉತ್ತಂಗಿ, ಸಂಘದ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುವುದಾಗಿ ತಿಳಿಸಿದರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನೆ ಬಲಪಡಿಸಲು ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರ ಕೋರಿದರು.ದಾವಣಗೆರೆ ಜಿಲ್ಲಾಧ್ಯಕ್ಷ ಶ್ರೀ ಶ್ರೀಧರ್, ಶ್ರೀ ನಟರಾಜ್, ಎಂ. ಸಿ. ಆನಂದ್, ಪ್ರಭಾಕರ್, ಬಸವರಾಜ್ ಗುಗ್ಗರಿ, ಬಿ. ಬಿ. ಅಸುಂಡಿ, ಕೊಪ್ಪಳ ಜಿಲ್ಲಾಧ್ಯಕ್ಷ ಶ್ರೀ ಪ್ರಭುರಾಜ್, ವಿಜಯನಗರ ಜಿಲ್ಲಾಧ್ಯಕ್ಷ ಶ್ರೀ ರವಿ. ರಾಜ್ಯ ಸಂಘದ ಪದಾಧಿಕಾರಿ ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ಶ್ರೀಮತಿ ಡಿ. ಪಾರ್ವತಮ್ಮ ಪ್ರಾರ್ಥಿಸಿದರು. ಶ್ರೀ ಲೋಕೇಶ್ ಸ್ವಾಗತಿಸಿದರು. ಶ್ರೀ ಗುರುನಾಥ್ ಕಾರ್ಯಕ್ರಮ ನಿರೂಪಿಸಿದರು.