ಸಿಂಧಗಿ

ರೈತರ ಬೇಡಿಕೆ ಈಡೇರಿಕೆಗೆ ರಾಜ್ಯ ಹೆದ್ದಾರಿ ಬಂದ್ ಚಳವಳಿ

ರೈತರ ಬೇಡಿಕೆ ಈಡೇರಿಕೆಗೆ ರಾಜ್ಯ ಹೆದ್ದಾರಿ ಬಂದ್ ಚಳವಳಿ

ಲೋಕದರ್ಶನ ವರದಿ 

        ಸಿಂದಗಿ 16 : ಗೋಲಗೇರಿ ಗ್ರಾಮದಲ್ಲಿ ಎಂಎಸ್‌ಪಿ ಪ್ರಕಾರ ಕಬ್ಬಿಗೆ ರೂ.5500 ಬೆಲೆ ನಿಗದಿ ಪಡಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಹೆದ್ದಾರಿ ಬಂದ ಮಾಡಿ ರಸ್ತಾರೋಖ ಚಳುವಳಿ ನಡೆಸಿ ಸಿಂದಗಿಯ ತಲಾಟಿ ನೀಖೀಲ ಖಾನಾಪುರ ಅವರಿಗೆ  ಮೂಲಕ ಮನವಿ ಸಲ್ಲಿಸಿದರು. 

     ಈ ಸಂದರ್ಭದಲ್ಲಿ  ಮಾತನಾಡಿದ ಮುಖಂಡರು, ಗೋಲಗೇರಿ ಸಂಪೂರ್ಣ ಬಂದ ಮಾಡುವುದರ ಜೊತೆಗೆ ರೈತರ ಮಹತ್ವ ಪೂರ್ಣವಾಗಿರತಕ್ಕಂತ ಹೋರಾಟ ಕೂಡಲೇ ಕೇಂದ್ರ ಸರ್ಕಾರ ಈ ವರ್ಷ ಬರಗಾಲಕ್ಕೆ ತುತ್ತಾಗಿರತಕ್ಕಂತಹ ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡಲೇ ರೈತರ ನೋವಿಗೆ ಸ್ಪಂದಿಸಿ ಕಬ್ಬಿಗೆ ರೂ.5500 ನಿಗದಿಯಾಗಬೇಕು ಮತ್ತು ತೊಗರಿ ಮತ್ತು ಹತ್ತಿ ಪ್ರತಿ ಕ್ವಿಂಟಲ್‌ಗೆ ರೂ.15000 ನಿಗದಿಯಾಗಬೇಕು.

        ಕೂಡಲೇ ಏಳು ದಿನಗಳ ಒಳಗಾಗಿ ಈ ಬೇಡಿಕೆಗಳು ಈಡೇರದಿದ್ದರೆ ಗೋಲಗೇರಿ ಸಂಪೂರ್ಣವಾಗಿ ಬಂದ್ ಮಾಡಿ ರೈತರ ಹೋರಾಟಕ್ಕೆ ಹೆಚ್ಚಿನ ಸ್ವರೂಪ ತಾಳಿ ಹೋರಾಟ ಮಾಡ್ತೀವಿ ಅಂತ ಹೇಳಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.  

     ಹೋರಾಟದ ನೇತೃತ್ವ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರೀಶೈಲ ಬಾ ಜಾಲವಾದಿ,  ಪಿಕಾರ್ಡ ಬ್ಯಾಂಕ ಅಧ್ಯಕ್ಷರು ಶಿವು ಹತ್ತಿ, ರೈತ ಹೋರಾಟ ಹಣಮಂತ್ರಾಯ ಚಿಂಚೋಳಿ, ಬಸವರಾಜ ಹದಗಲ, ದೇವಣ್ಣಗೌಡ ಹದಗಲ, ನೀಲಕಂಠ ಚಲವಾದಿ, ಮಡಿವಾಳ ನಾಯ್ಕೋಡಿ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಮಾರಲಬಾವಿ, ಅಂಬರೀಶ ಮಾರಲಬಾವಿ, ಗೌಡಣ್ಣ ಬಿರಾದಾರ ಮತ್ತು ಮುರುಗೇಶ ನಾಯ್ಕೋಡಿ, ಬಾಬು ಜಾಲವಾದಿ, ಶರಣಗೌಡ ಪಾಟೀಲ ಸೇರಿದಂತೆ  ಅನೇಕ ರೈತ ಬಂಧುಗಳು ವಿವಿಧ ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು. 


ಸುದ್ದಿ ಓದಿ