ಸಿಂಧಗಿ

371(ಜೆ) ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘಗಳ ಬೆಂಬಲ

371(ಜೆ)  ಧರಣಿ ಸತ್ಯಾಗ್ರಹಕ್ಕೆ  ವಿವಿಧ ಸಂಘಗಳ ಬೆಂಬಲ

ಲೋಕದರ್ಶನ ವರದಿ 

        ಸಿಂದಗಿ  10: ನಗರದ ಬಸವೇಶ್ವರ ಸರ್ಕಲ್ ಹತ್ತಿರ, ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಜೆ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹ 8 ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ಸರಕಾರಿ ಹಾಗೂ ಅರೆ ಸರಕಾರಿ ನಿವೃತ್ತ ನೌಕರರ ಸಂಘದ ಸದಸ್ಯರು ಮತ್ತು ಶ್ರೀ ನೀಲಗಂಗಾದೇವಿ ಚೌಕ ಯುವಕ ಮಂಡಳಿ ಯುವಕರು, ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಬೆಂಬಲ ಸೂಚಿಸಿದರು. 

       ಈ ಸಂದರ್ಭದಲ್ಲಿ  ನಿವೃತ್ತ ನೌಕರರ ಸಂಘದ ಅಧ್ಯಕ್ಷ ವ್ಹಿ.ಬಿ.ಕುರಡಿ, ಉಪಾಧ್ಯಕ್ಷ ಎಸ್‌.ಎಲ್‌.ಪಾಟೀಲ, ನಿವೃತ್ತ ಶಿಕ್ಷಕ ಎಸ್‌.ಬಿ.ಮುರಗಾನೂರ, ಬಿಜೆಪಿ ಮಹಿಳಾ ಘಟಕದ ಅದ್ಯಕ್ಷೆ ನೀಲಮ್ಮ ಯಡ್ರಾಮಿ ಮಾತನಾಡಿ,  ಹಲವಾರು ವರ್ಷಗಳಿಂದ ಹೈದ್ರಾಬಾದ ಕರ್ನಾಟಕ ಜನತೆ ನಡೆಸಿದ ಹೋರಾಟದ ಪ್ರತಿಫಲವಾಗಿ 2012,13 ರಲ್ಲಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ 371(ಜೆ) ಕಲಂ ಅನ್ನು ಜಾರಿಗೆ ತರಲಾಗಿದೆ. 


ಸುದ್ದಿ ಓದಿ