ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಸೌಲಭ್ಯ ಕಲ್ಪಿಸಲು ಒತ್ತಾಯ
ಲೋಕದರ್ಶನ ವರದಿ
ಸಿಂದಗಿ 08 : ನಗರದ ಬಸವೇಶ್ವರ ಸರ್ಕಲ್ ಹತ್ತಿರ, ಗೋಕಾಕ ಚಳವಳಿಯ ರೂವಾರಿ ರೇ.ಜೆ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 5 ದಿನಗಳೀಂದ ನಡೆದ ಧರಣಿ ಸತ್ಯಾಗ್ರಹಕ್ಕೆ ವಕೀಲರ ಸಂಘ ಹಾಗೂ ಮಹಿಳಾ ಜಾಗರಣಾ ವೇದಿಕೆ, ಮತ್ತು ಜಿ.ಪಿ.ಪೋರವಾಲ ಕಾಲೇಜು ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಹಾಗೂ ಪದ್ಮರಾಜ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು, ರಾಜಕೀಯ ಮುಖಂಡರು ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಕೊರವಾರ ಬಾಪುಗೌಡ ಪಾಟೀಲ, ಡಿಸಿಸಿ ಬ್ಯಾಂಕನ ಮಾಜಿ ನಿರ್ದೆಶಕ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಮಾತನಾಡಿ, 2012,13 ರಲ್ಲಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ 371(ಜೆ) ಕಲಂ ಅನ್ನು ಜಾರಿಗೆ ತರಲಾಗಿದೆ. ಆದರೆ ಈ ಕಲಂನಿಂದ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿದ್ದು ದುರಂತವೇ ಸರಿ. ಈ ಭಾಗದ ಅನೇಕರು ರಜಾಕರ ಹಾಗೂ ಹಾವಳಿಯಿಂದ ನಡೆದ ದಂಗೆಯಲ್ಲಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಅದರಿಂದು ಹೆಚ್ಚು ಅನ್ಯಾಯಕ್ಕೊಳಗಾಗಿದೆ ಆ ಕಾರಣಕ್ಕೆ ಇಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಸಿಗಬೇಕಾದ ಮೀಸಲಾತಿ ದೊರಕುವುದು ಅತ್ಯವಶ್ಯಕವಾಗಿದೆ ವಿಜಯಪುರ ಜಿಲ್ಲೆಯ ಜನರ ಆಶೋತ್ತರಗಳು ಈಡೇರಬೇಕಾದರೆ 371(ಜೆ) ಕಲಂಗೆ ಅನ್ವಯ ಮಾಡಬೇಕ. ಎಂದು ಆಗ್ರಹಿಸಿದರು.
ಗೋಕಾಕ ಚಳವಳಿಯ ರೂವಾರಿ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿಯ ಪ್ರಮುಖರಾದ ರಂಗನಾಥ ತೋರ್ಫೆ, ಮಹಿಳಾ ಜಾಗರಣಾ ವೇದಿಕೆಯ ಶೈಲಜಾ ಸ್ಥಾವರಮಠ, ಸಮಿತಿಯ ದಾನಪ್ಪಗೌಡ ಚನ್ನಗೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಯರಗಲ್ ಗ್ರಾಮದ ಎಸ್.ಬಿ.ಪಾಟೀಲ ವಕೀಲರು, ಎಂ.ಎಂ.ಹಂಗರಗಿ, ರೈತಸಂಘದ ಅಶೋಕ ಅಲ್ಲಾಪುರ, ಬೀಮಣ್ಣ ಹೆರೂರ, ಮಹಾಂತಯ್ಯ ಮಠ, ಜಿಪಿ ಪೋರವಾಲ ಕಾಲೇಜಿನ ಉಪನ್ಯಸಕರಾದ ಡಾ.ರವಿ.ಲಮಾಣಿ, ಪ್ರಕಾಶ ರಾಠೋಡ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.