ಬಳ್ಳಾರಿ

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಬಜೆಟ್: ಶಂಶಾದ ಬೇಗಂ

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಬಜೆಟ್: ಶಂಶಾದ ಬೇಗಂ

ಬಳ್ಳಾರಿ 10: ಕೃಷಿ ಕ್ಷೇತ್ರವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್ ತದ್ವಿರುಧ್ಧವಾಗಿದೆ ರೈತರ ಅಭಿವೃಧ್ಧಿಯ ಬಗ್ಗೆ ಸಮಗ್ರ ದೃಷ್ಠಿಕೋನದ ಕೊರತೆ ಬಜಡಟ್‍ನಲ್ಲಿ ಎದ್ದು ಕಾಣುತ್ತಿದೆ ಎಂದು ರಾಜ್ಯ ರೈತ ಸಂಘದ ರೈತ ಹೋರಾಟಗಾರ್ತಿ ಶಂಶಾದ್ ತಿಳಿಸಿದ್ದಾರೆ.

2023ರ ವೇಳೆಯ ರೈತರ ಆದಾಯ ದ್ವಿಗುಣಗೊಳಿಸುವ  ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಯಾವ ಕಾರ್ಯ ಸೂಚಿಯನ್ನು ಸಿದ್ದಪಡಿಸದಿರಿವುದು, ಬಜೆಟ್‍ನಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿಲ್ಲ.ಅಂತರ್ರಾಷ್ಟ್ರೀಯ ಮಹಿಳಾ ದಿನದಂದು ಅವರ ಬಗ್ಗೆ ಪ್ರಸ್ತಾಪಿಸುತ್ತಲೇ. 

ಮುಖ್ಯಮಂತ್ರಿಯವರು ಬಜೆಟ್ ಭಾಷಣ ಆರಂಭಿಸಿದ್ದಾರೆ ಆದರೆ ರೈತ ಮಹಿಳೆಯರ ಬಗ್ಗೆ ಒಂದು ಅಂಶವು ಇಲ್ಲ. ಕೃಷಿಯಲ್ಲಿ ಮಹಿಳೆಯರು 90ರ ಭಾಗ ಕೆಲಸ ಮಾಡುವವರು ಮಹಿಳೆಯರೇ, ಆದರೆ ಅವರಿಗೆ ಭೂಮಿಯ ಹಕ್ಕು ಇಲ್ಲ. ಶೇಕಡ 22.ರಷ್ಟು ರೈತ ಮಹಿಳೆಯರು ಮಾತ್ರ ಭೂಮಿಯನ್ನು ಹೊಂದಿದ್ದಾರೆ ಭೂಮಿಯ ಹಕ್ಕು ಹೊಂದಿಲ್ಲದ ಗ್ರಾಮೀಣ ಮಹಿಳೆಯರಿಗೆ ಉತ್ತೇಜನ ಸಿಗಬೇಕು.ಅದು ಪ್ರಶಸ್ತಿ ಸನ್ಮಾನಕ್ಕೆ ಮಾತ್ರ ಸೀಮಿತವಾಗಿದೆ. ಪುರುಷರಿಗೆ ಸರಿಸಮಾನವಾಗಿ ಪ್ರೋತ್ಸಾಹ ಸಿಗಬೇಕಿತ್ತು. ಆದರೆ. ಬಜೆಟ್ನಲ್ಲಿ ಅದು ಸಿಕ್ಕಿಲ್ಲ. ಇದು ಈ ಬಜೆಟ್ನಲ್ಲಿ ದೊಡ್ಡ ದುರಂತವಾಗಿದೆ ಎಂದು ರಾಜ್ಯ ರೈತ ಸಂಘದ ಶಂಶಾದ್ ಬೇಗಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ