ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ:
ತಾಳಿಕೋಟಿ: ವಿಜಯಪುರ ಜಿಲ್ಲಾ ವಿಜ್ಞಾನ ಕೇಂದ್ರ (ಅಗಸ್ತ್ಯ ಫೌಂಡೇಶನ್)ನಲ್ಲಿ ಜರುಗಿದ ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ವಸ್ತುಪ್ರದರ್ಶನ (ಭೌತವಿಜ್ಞಾನ ವಿಭಾಗ)ದಲ್ಲಿ ಭಾಗವಹಿಸಿದ ಪೀರಾಪೂರ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಮೇಘನಾ ನಾವದಗಿ ಹಾಗೂ ರೂಪಾ ಬಿರಾದಾರ ಅವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ವಿಜಯಪುರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆದ ಈ ಪ್ರದರ್ಶನದಲ್ಲಿ ಪೀರಾಪೂರ ಪ್ರೌಢಶಾಲೆಯಿಂದ ಭಾಗವಹಿಸಿದ 9ನೇ ತರಗತಿಯ ಕುಮಾರಿ ಮೇಘನಾ ನಾವದಗಿ ಹಾಗೂ ರೂಪಾ ಬಿರಾದಾರ ಅವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಇಬ್ಬರು ವಿದ್ಯಾರ್ಥಿನಿಯರು ಪ್ರದರ್ಶನಲ್ಲಿ ತೋರಿದ ಅದ್ಭುತ ಸಾಧನೆಗೆ ಹಾಗೂ ಇವರನ್ನು ಅತ್ಯುತ್ತಮವಾಗಿ ತರಬೇತುಗೊಳಿಸಿ ಸೂಕ್ತ ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕ ಸಿ.ಎನ್. ರಾವ್ ವಿಜ್ಞಾನ ಪ್ರಶಸ್ತಿ ವಿಜೇತ ವಿ.ಎನ್. ಯಾತಗಿರಿ ಅವರಿಗೆ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುರೇಶ ಬಾಬುಗೌಡ ಬಿರಾದಾರ, ಮುಖ್ಯೋಪಾಧ್ಯಾಯ ಅರ್.ಬಿ. ದಮ್ಮೂರಮಠ ಹಾಗೂ ಶಾಲಾ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ