ಬಳ್ಳಾರಿ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ : ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್‌ ಟ್ರಸ್ಟ್‌ ಅಮೋಘ ಸಾಧನೆ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ : ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್‌ ಟ್ರಸ್ಟ್‌ ಅಮೋಘ ಸಾಧನೆ

ಲೋಕದರ್ಶನ ವರದಿ 


ಬಳ್ಳಾರಿ 08: ಅಲ್ ಇಂಡಿಯಾ ಖಾಯ್‌ಜಿನ್ ಮಹರ್ಷಿಯಲ್ ಆಟ್ಸ್‌, ಅಕಾಡೆಮಿ ಶಿವಮೊಗ್ಗ, ಸನ್‌ಸಾಯಿ ಬಸವರಾಜ ಇವರು ದಿ. 07ರಂದು ಶಿವಮೊಗ್ಗ ನಗರದ ವಿರೇಶ್ವರ ಪುಣ್ಯಾಶ್ರಮ ಸಭಾಭವನದಲ್ಲಿ ಏರಿ​‍್ಡಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್‌ ಟ್ರಸ್ಟ್‌ನ ಕರಾಟೆ ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ. 

ಟ್ರಸ್ಟ್‌ನ ಸುಮಾರು 7 ವಿದ್ಯಾರ್ಥಿಗಳು ಭಾಗವಹಿಸಿದ್ದರು. 15 ವರ್ಷದ ಒಳಗಿನ ಕಟಾ ಮತ್ತು ಕುಮ್ಮಟಿ ವಿಭಾಗದಲ್ಲಿ ಕುಮಾರ್ ಋಷಿಗೌಡ, ದ್ವೀತಿಯ ಸ್ಥಾನ ಅರ್ಜುನರೆಡ್ಡಿ.ಟಿ, ಕಟಾ ಮತ್ತು ಕುಮ್ಮಟಿ ವಿಭಾಗದಲ್ಲಿ ಪ್ರಥಮ ಸ್ಥಾನ ಪ್ರಜ್ವಲ್ ಗಣೇಶ್‌.ಬಿ, ಕಟಾ ಮತ್ತು ಕುಮ್ಮಟಿ ಪ್ರಥಮ ಸ್ಥಾನ ಮಾನಸ, ಕಟಾ ಮತ್ತು ಕುಮ್ಮಟಿ ಪ್ರಥಮ ಸ್ಥಾನ ಸಿರಿ, ಕಟಾ ಮತ್ತು ಕುಮ್ಮಟಿ ದ್ವೀತಿಯ ಸ್ಥಾನ ಮಹಮ್ಮದ್ ಅಲಿ, ಕಟಾ ಮತ್ತು ಕುಮ್ಮಟಿ ದ್ವೀತಿಯ ಸ್ಥಾನ, ಗಗನ್ ಹೆಗ್ಡೆ ಕಟಾ ಮತ್ತು ಕುಮ್ಮಟಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗೆಲುವು ದಾಖಲಿಸಿದ್ದಾರೆ. 

ಟ್ರಸ್ಟ್‌ನ ಅಧ್ಯಕ್ಷರು ಮತ್ತು ತರಬೇತುದಾರ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಸಂಚಾಲಕ ಶಬರಿ ರವಿ, ಗೌರವಾಧ್ಯಕ್ಷ ವಿಕ್ರಂ ಮಣಿಪಾಲ್ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.   

ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಗದುಗಿನ ವಿರೇಶ್ವರ ಪುಣ್ಯಾಶ್ರಮ ಪೀಠಾಧಿಪತಿ ಕಲ್ಲಯ್ಯ ಅಜ್ಜನವರು ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ರಾಜ್ಯದ ಹಲವಾರು ನುರಿತ ಕರಾಟೆ ಶಿಕ್ಷಕರು ಭಾಗವಹಿಸಿದ್ದರು. 


ಸುದ್ದಿ ಓದಿ