ರಾಜ್ಯ ಮಟ್ಟದ ಐತಿಹಾಸಿಕ ಎಸ್.ಟಿ ಸಮಾವೇಶ: ಪೂರ್ವ ಸಿದ್ಧತೆ
ಬಳ್ಳಾರಿ :ನ (13) ರಂದು ಇದೇ ನ. 20 ರಂದು ಗಣಿನಾಡು ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಐತಿಹಾಸಿಕ ಎಸ್.ಟಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮ ನಡೆಯುವ ಸ್ಥಳವನ್ನು ಬಳ್ಳಾರಿ ಉಸ್ತುವಾರಿ ಸಚಿವ ಬಿ ಶ್ರೀರಾಮುಲುರವರು ಖುದ್ದು ಪರೀಶೀಲನೆ ನಡೆಸಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಈ ಸಮಾವೇಶಕ್ಕೆ ರಾಜ್ಯ ಹಾಗೂ ಹೊರಭಾಗಗಳಿಂದ 5ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಬಾಂಧವರು ಭಾಗವಹಿಸಲಿದ್ದು, ಇತಿಹಾಸದ ಪುಟಗಳಲ್ಲಿ ಇದು ದಾಖಲಾಗುವುದರಲ್ಲಿ ಅನುಮಾನವೇ ಇಲ್ಲ.ಸಮಾವೇಶಕ್ಕೆ ಬರುವವರೆಗೆ ಬೆಳಗಿನ ಉಪಹಾರ, ಉಟ ಸೇರಿದಂತೆ ಯಾವುದರಲ್ಲೂ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ, ಮಾಜಿ ಲೋಕಸಭಾ ಸದಸ್ಯ ಜೆ.ಶಾಂತ. ಮಾಜಿ ಬುಡ ಮಾಜಿ ಅಧ್ಯಕ್ಷರಾದ ಪಾಲಣ್ಣ. ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೀರಶೇಖರ ರೆಡ್ಡಿ. ಸಚಿವರ ಆಪ್ತ ಸಹಾಯಕ ರಾಜು ಮತ್ತು ಶ್ರೀರಾಮು ಹಾಗೂ ಬಳ್ಳಾರಿ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಸಂಚಾಲಕರಾದ ರವೀಂದ್ರರೆಡ್ಡಿ, ತೊಗರಿ ರಾಜೀವ್ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.