ಬಳ್ಳಾರಿ

ರಾಜ್ಯ ಮಟ್ಟದ ಸಿಎಂಇ ಕ್ಯಾನ್ಸರ್ ವಿಶೇಷ ಜಾಗೃತಿ ಕಾರ್ಯಾಗಾರ

ರಾಜ್ಯ ಮಟ್ಟದ ಸಿಎಂಇ ಕ್ಯಾನ್ಸರ್ ವಿಶೇಷ ಜಾಗೃತಿ ಕಾರ್ಯಾಗಾರ


ಬಳ್ಳಾರಿ 26: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರಾಜೀವಗಾಂಧಿ ವಿಶ್ವವಿದ್ಯಾಲಯ ಮತ್ತು ವಿಜ್ಞಾನ ಕೇಂದ್ರ,ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜೆಎಸ್‌ಡಬ್ಲ್ಯೂ ಸಂಯುಕ್ತ ಆಶ್ರಯದಲ್ಲಿ ತೋರಣಗಲ್ ಬಳಿಯ ಜೆಎಸ್‌ಡಬ್ಲ್ಯೂ ಎಕ್ಸಪೀರಿಯಂಸ್ ಸೆಂಟರ್ ಸಭಾಂಗಣದಲ್ಲಿ ಒಂದು ದಿನದ ರಾಜ್ಯಮಟ್ಟದ ಸಿಎಂಇ ಕ್ಯಾನ್ಸರ್ ವಿಶೇಷ ಜಾಗೃತಿ ಕಾರ್ಯಾಗಾರ ಶನಿವಾರ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಾಗಾರಕ್ಕೆ ವಿಮ್ಸ್‌ ನಿರ್ದೇಶಕ ಡಾ. ಗಂಗಾಧರಗೌಡ ಅವರು ಚಾಲನೆ ನೀಡಿ ಮಾತನಾಡಿ ಈ ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳಿಂದ ವೈದ್ಯರು ಆಗಮಿಸಿದ್ದು, ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಉತ್ತಮ ತರಬೇತಿಯನ್ನು ಪಡೆದುಕೊಂಡು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಕ್ಯಾನ್ಸರ್ ವಿರುದ್ಧ ಹೋರಾಡಬೇಕು ಎಂದರು. 

ಜೆಎಸ್‌ಡಬ್ಲ್ಯೂ ಹಿರಿಯ ಉಪಾಧ್ಯಕ್ಷ ಸಂಜಯ್ ಹಂದೂರ್ ಅವರು ಮಾತನಾಡಿ, ಈ ಕಾರ್ಯಾಗಾರವು ನಮ್ಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ, ಆರೋಗ್ಯ ಸಂಸ್ಥೆಯಲ್ಲಿ ವೈದ್ಯರುಗಳು ಕ್ಯಾನ್ಸರ್ ಪೀಡಿತ ರೋಗಿಗಳ ಚಿಕಿಗತ್ಸೆಗೆ ಹೆಚ್ಚು ಒತ್ತು  ಕೊಡಬೇಕು ಮತ್ತು ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಿದ್ವಾಯಿಯ ಡಾ.ಶೋಭಾ ಮತ್ತು ಡಾ. ನವೀನ್ ಅವರು ಸ್ತ್ರೀರೋಗ ಕ್ಯಾನ್ಸರ್ ಮತ್ತು ಕ್ಯಾನ್ಸರ್‌ಗೆ ರೇಡಿಯೊಥೆರಪಿ ಆಯ್ಕೆಗಳು ಕುರಿತು ಉಪನ್ಯಾಸಗಳನ್ನು ನೀಡಿದರು. 

ಶಸ್ತ್ರಚಿಕಿತ್ಸಕ ಡಾ. ಗೋವಿಂದರಾಜು, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ರಮೇಶ್ ಅವರು ತಮ್ಮ ವಿಷಯಗಳ ಕುರಿತು ಪ್ರಸ್ತುತಪಡಿಸಿದರು. 

ರಾಯಚೂರಿನ ರಿಮ್ಸ್‌, ಕೊಪ್ಪಳದ ಕಿಮ್ಸ್‌, ಶಿವಮೊಗ್ಗದ ಸಿಮ್ಸ್‌, ಗುಲ್ಬರ್ಗ ಎಂಆರ್‌ಎಂಸಿ, ಚಾಮರಾಜನಗರದ  ಚಿಮ್ಸ್‌ನ  ಪದವೀಧರರು/ಸ್ನಾತಕೋತ್ತರ ಪದವೀಧರರು, ಅನಂತಪುರ ಸರಕಾರಿ ವೈದ್ಯಕೀಯ ಕಲೇಜಿನ ಸ್ನಾತಕೋತ್ತರ ಪದವೀಧರರು, ದಂತ ವಿದ್ಯಾರ್ಥಿಗಳು, ನಸಿಂರ್ಗ್ ವಿದ್ಯಾರ್ಥಿಗಳು ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಐಆರ್‌ಸಿ ಬಳ್ಳಾರಿ ಘಟಕದ ಉಪಸಭಾಪತಿ ಡಾ.ಎಸ್‌.ಜೆ.ವಿ ಮಹಿಪಾಲ್, ಖಜಾಂಚಿ ಪೋಲಾ ರಾಧಾಕೃಷ್ಣ, ಕಾರ್ಯದರ್ಶಿ ಶಕೀಬ್ ಅಹಮದ್, ವೈಜ್ಞಾನಿಕ ಸೆಷನ್ ಚೇರ್ಮನ್ ಡಾ.ರಮೇಶ್, ಕಮ್ಯುನಿಟಿ ಮೆಡಿಸಿನ್‌ನ ಡಾ.ಸುರೇಶ್, ಡಾ.ಅನಂತಾಚಾರಿ,ವಿಮ್ಸ್‌ನ ಡೆಂಟಲ್ ಕಾಲೇಜು ಮತ್ತು ನಸಿಂರ್ಗ್ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು. 


ಸುದ್ದಿ ಓದಿ