ಬಳ್ಳಾರಿ

ಬಳ್ಳಾರಿಯಿಂದ ಗೋವಾಕ್ಕೆ ಬಸ್ ಸಂಚಾರ ಪ್ರಾರಂಭ

ಬಳ್ಳಾರಿಯಿಂದ ಗೋವಾಕ್ಕೆ ಬಸ್ ಸಂಚಾರ ಪ್ರಾರಂಭ

ಬಳ್ಳಾರಿ, ಸೆಪ್ಟೆಂಬರ್ 11: ಕೋವಿಡ್-19 ಹರಡುವ ಹಿನ್ನಲೆಯಲ್ಲಿ ಈಕರಸಾ ಸಂಸ್ಥೆಯ ಬಳ್ಳಾರಿ ವಿಭಾಗದಿಂದ ಗೋವಾ ರಾಜ್ಯಕ್ಕೆ ಕಾರ್ಯಾಚರಣೆಗೊಳಿಸಲಾಗುತ್ತಿದ್ದ ಸಂಸ್ಥೆಯ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೇ ಕಾರ್ಯಾಚರಣೆಯನ್ನು ಬಳ್ಳಾರಿ-ಪಣಜಿ (ಗೋವಾ) ಮಾರ್ಗದಲ್ಲಿ ಅಂರ್ತರಾಜ್ಯ ಸಾರಿಗೆಯನ್ನು ಪ್ರಾರಂಭಿಸಲಾಗಿದೆ ಎಂದು ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಂಭೂಕಾರ್ ರಾಮರಾವ್ ಚಂದ್ರಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ -ಪಣಜಿ ವಯಾ ಹೊಸಪೇಟೆ, ಹುಬ್ಬಳ್ಳಿ ಮಾರ್ಗವಾಗಿ ಹೊರಡುವ ಬಸ್ಗಳು ಬಳ್ಳಾರಿ ವಿಭಾಗದಿಂದ ಬಿಡುವ ವೇಳೆ ಸಂಜೆ 5.30ಕ್ಕೆ ಹಾಗೂ ರಾತ್ರಿ 9ಕ್ಕೆ ಹೊರಡಲಿದ್ದು, ಆನ್ ಲೈನ್ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

 

ಸುದ್ದಿ ಓದಿ