ಕೆರೆ ಹೂಳು ಎತ್ತುವ ಕಾಮಗಾರಿಗೆ ಚಾಲನೆ
ಮುಂಡಗೋಡ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಕಲಕೇರಿ ಗ್ರಾಮದ 5.33 ಎಕರೆ ಬದನಕಟ್ಟಿ ಕೆರೆ ಹೂಳು ಎತ್ತುವ ಕಾಮಗಾರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಚಾಲನೆ ನೀಡಿದರು.
ನಾಗನೂರ ಗ್ರಾಮ ಪಂಚಾಯತಿ ಅಧ್ಯಕ್ಷ ಸುನೀಲ ಸಳಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ಬನಸೊಡೆ, ಗ್ರಾ.ಪಂ.ಸದಸ್ಯರಾದ ಸೋಮಲಿಂಗ, ಬಸವರಾಜ ಭಜಂತ್ರಿ, ಕೆರೆ ಸಮಿತಿ ಅಧ್ಯಕ್ಷ ಪ್ರಕಾಶ ಯರೇಬೈಲ್, ಮುಂಡಗೋಡ ಯಲ್ಲಾಪುರ ತಾಲೂಕಿನ ಯೋಜನಾಧಿಕಾರಿ ಹನುಮಂತ ನಾಯ್ಕ, ಕೃಷಿ ಮೇಲ್ವಿಚಾರಕರಾದ ಗೀರೀಶ ಕೋಳಿವಾಡ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚೈತ್ರಾ, ವಲಯ ಮೇಲ್ವಿಚಾರಕರಾದ ರಾಧಾ, ಪ್ರಭಾವತಿ ಮುಂತಾದವರು ಉಪಸ್ಥಿತರಿದ್ದರು.