ಬಳ್ಳಾರಿ

ಚಾರ್ಟರ್ಡ್‌ ಅಕೌಂಟೆಂಟ್ ಪರೀಕ್ಷೆ ಪ್ರಾರಂಭ

ಚಾರ್ಟರ್ಡ್‌ ಅಕೌಂಟೆಂಟ್ ಪರೀಕ್ಷೆ ಪ್ರಾರಂಭ

ಬಳ್ಳಾರಿ 05: ಚಾರ್ಟರ್ಡ್‌ ಅಕೌಂಟೆಂಟ್ ಪರೀಕ್ಷೆಗಳು ಭಾರತಾದ್ಯಂತ ಇಂದಿನಿಂದ ದಿ. 5ರಿಂದ 30ರ ವರೆಗೆ ನಡೆಯುತ್ತವೆ.  ಈ ಪರೀಕ್ಷೆಗಳು ಭಾರತದಲ್ಲಿ ಅಲ್ಲದೆ ದುಬೈ, ಅಬುದಾಬಿ, ಮಸ್ಕಟ್ ಮತ್ತು ನೆಪಾಳದ ಕಟ್‌ಮಂಡು ಸೇರಿದಂತೆ ಒಟ್ಟು 368 ಕೇಂದ್ರಗಳಲ್ಲಿ ನಡೆಯುತ್ತವೆ. ಇದರಲ್ಲಿ ಬಳ್ಳಾರಿಯು ಕೂಡ ಒಂದು ಪರೀಕ್ಷಾ ಕೇಂದ್ರವಾಗಿದ್ದು, ಈ ಪರೀಕ್ಷೆಯು ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ನಡೆಯುತ್ತವೆ.  

ಸಿಎ ಫೈನಲ್, ಇಂಟರ್‌ಮೀಡಿಯೇಟ್, ಐಪಿಸಿಸಿ ಮತ್ತು ಫೌಂಡೇಶನ್ ಸೇರಿದಂತೆ ಒಟ್ಟು 1000 ವಿಧ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಈ ಪರೀಕ್ಷೆಯು ಸುಪ್ರೀಂ ಕೋರ್ಟ್‌ ಆದೇಶದಂತೆ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸಿ ನಡೆಸಲಾಗುತ್ತಿದೆ ಎಂದು ಕಾರ್ಯದರ್ಶಿ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಸಂಸ್ಥೆ ಸಿಎ. ಹೊನ್ನೂರ ಸ್ವಾಮಿ  ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ