ತಾಳಿಕೋಟಿ

ಶ್ರೀಶೈಲ ಜಗದ್ಗುರುಗಳ ಆಶೀರ್ವಾದ ಪಡೆದ ಡಾ. ಪ್ರಭುಗೌಡ

ಶ್ರೀಶೈಲ ಜಗದ್ಗುರುಗಳ ಆಶೀರ್ವಾದ ಪಡೆದ ಡಾ. ಪ್ರಭುಗೌಡ

ತಾಳಿಕೋಟಿ: ಲೋಕ ಕಲ್ಯಾಣ ಹಾಗೂ ಧರ್ಮ ಜಾಗೃತಿಗಾಗಿ ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆಯನ್ನು ನಡೆಸುತ್ತಿರುವ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಇವರಿಂದ ನಾಡಿನ ಖ್ಯಾತ ನೇತ್ರತಜ್ಞ ಕಾಂಗ್ರೆಸ್ ಮುಖಂಡ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಆಶೀರ್ವಾದ ಪಡೆದರು. 

ಶ್ರೀಗಳ ಪಾದಯಾತ್ರೆ ತಾಳಿಕೋಟಿಯಿಂದ ಬ.ಸಾಲವಾಡಗಿಗೆ ತೆರಳುವ ಮಾರ್ಗದ ಮೈಲೇಶ್ವರ ಗ್ರಾಮದ ಹತ್ತಿರ ಪರಮ ಪೂಜ್ಯ ಜಗದ್ಗುರುಗಳೊಂದಿಗೆ ಪಾದಯಾತ್ರೆಯಲ್ಲಿ ಜೊತೆಗೂಡಿದ ಡಾ.ಪ್ರಭುಗೌಡರು ಅವರನ್ನು ಗೌರವದೊಂದಿಗೆ ಸ್ವಾಗತಿಸಿ ಗೌರವಸಮರ್ಪಣೆ ನೀಡಿದರು. ಇದೇ ಸಮಯದಲ್ಲಿ ಶ್ರೀಗಳು ಅವರನ್ನು ಸನ್ಮಾನಿಸಿ ಅವರ ಸಮಾಜಮುಖಿ ಸೇವಾಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಮಯದಲ್ಲಿ ಗಚ್ಚಿನಮಠದ ಪೂಜ್ಯರಾದ ಶ್ರೀ ಕಾಶಿನಾಥ ಮಹಾಸ್ವಾಮಿಗಳು, ಗುಂಡಕನಾಳದ ಪರಮ ಪೂಜ್ಯ ಶ್ರೀ ಗುರುಲಿಂಗ ಸ್ವಾಮಿಗಳು ಡಾಽಽ ಪ್ರಭುಗೌಡರ ಆಪ್ತ ದತ್ತಾತ್ರೇಯ ಹೊಸಮಠ ಇದ್ದರು 


ಸುದ್ದಿ ಓದಿ