ಶ್ರೀಗಂಗಾಪರಮೇಶ್ವರಿದೇವಿ ಜಾತ್ರೆ 8ರಂದು
ಲೋಕದರ್ಶನ ವರದಿ
ಮುಂಡಗೋಡ: ಮೇ.8ರಂದು ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿರುವ ಶ್ರೀಗಂಗಾಪರಮೇಶ್ವರಿದೇವಿ
9ನೇ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 9ಗಂಟೆಗೆ ಹಣಹೋಮ, ದುರ್ಗಾಹೋಮ, ಪಂಚಾಮೃತ ಅಭಿಷೇಕ, ಸಹಸ್ರ ಕುಂಕುಮ ಅರ್ಚನೆ, ಫಲ-ಪುಷ್ಪ ಸಮರೆ್ಣ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ. ನಂತರ ಮಧ್ಯಾಹ್ನ 1.30ರಿಂದ ಭಕ್ತಾದಿಗಳಿಗೆ ಅನ್ನಸಂತರೆ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.