ಬಳ್ಳಾರಿ

ಗಣೇಶೋತ್ಸವ ನಿರ್ಭಂಧ ಮರಳಿ ಪಡೆಯುವಂತೆ ಶ್ರೀರಾಮ ಸೇನೆ ಮನವಿ

ಗಣೇಶೋತ್ಸವ ನಿರ್ಭಂಧ ಮರಳಿ ಪಡೆಯುವಂತೆ ಶ್ರೀರಾಮ ಸೇನೆ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ಅ.30 : ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಕೋವಿಡ್ ನೆಪವೊಡ್ಡಿ  ನಿಷೇಧ ಹೇರಿರುವುದನ್ನು ಖಂಡಿಸುತ್ತೆವೆ ಎಂದು ಶ್ರೀರಾಮ ಸೇನಾ ತಾಲೂಕಾಧ್ಯಕ್ಷ ರವಿಕುಮಾರ ಬಡಿಗೇರ ಹೇಳಿದರು. 

ಪಟ್ಟಣದ ತಹಶಿಲ್ದಾರ್ ಕಚೇರಿಯ ಬಳಿ ಶ್ರೀರಾಮ ಸೇನೆಯ ತಾಲೂಕು ಘಟಕವು ಸಾರ್ವಜನಿಕ ಗಣೋಶೋತ್ಸವಕ್ಕೆ ಕೊವಿಡ್ ನೆಪವೊಡ್ಡಿ ರದ್ದುಗೊಳಿಸಿರುವುದನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮನವಿ ನೀಡಿ ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಇಳಿಮುಖವಾಗಿದ್ದು ಸರ್ಕಾರದಿಂದಲೇ ಎಲ್ಲಾ ಕ್ಷೇತ್ರಗಳಿಗೆ ಕಾರ್ಯನಿರ್ವಹಿಸುವಂತೆ ಅನುಮತಿ ನೀಡಿದ್ದು ಒಂದೆಡೆಯಾದರೆ ರಾಜಕೀಯ ಸಭೆ ಸಮಾರಂಭಗಳಿಗೆ ಸಾವಿರಾರು ಜನರು ಸೇರುವ ಹತ್ತಾರು ಕಾರ್ಯಕ್ರಮಗಳಿಗಿಲ್ಲದ ವಿರೋಧ ವಿಘ್ನವಿನಾಶಕ ವಿಘ್ನೇಶ್ವರನ ಉತ್ಸವಕ್ಕೆಕೆ, ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ಗಣೇಶನ ಮೂರ್ತಿಗಳನ್ನು ಸಿಧ್ಧ ಪಡಿಸುವ ಕಾರ್ಯಕ್ಕೆ ಆಚರಣೆಗೆ ಚ್ಯುತಿ ಬಾರದಂತೆ ನಿಯಮ ಉಲ್ಲಂಘನೆಯಾಗದಂತೆ ಶೀಘ್ರ ನಿರ್ಭಂಧ ಮರಳಿ ಪಡೆಯಬೇಕೆಂದು ಆಗ್ರಹಿಸಿದರು.  

ಈ ಸಂಧರ್ಭಲ್ಲಿ ವಕೀಲ ಚಂದ್ರಶೇಖರ್‌.ಸಂತೋಷ ಪೂಜಾರ, ನಾಗರಜ್ ಚಿಂತ್ರಪಳ್ಳಿ, ಕೋಟೇಶ್, ಗಣೇಶ್, ಶ್ರೀಕಾಂತ, ಬಸವರಾಜ್, ಇ.ಟಿ.ಮಂಜುನಾಥ್, ಕೊಟ್ರೇಶ್ ಎಂ. ಇದ್ದರು. 


ಸುದ್ದಿ ಓದಿ