ಶ್ರೀಮಾರಿಕಾಂಬಾ(ದ್ಯಾಮವ್ವ)ದೇವಿ ಮೂರ್ತಿ ಮರು ಪ್ರತಿಷ್ಠಾಪನೆ ಇಂದು
ಮುಂಡಗೋಡ:ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾ(ದ್ಯಾಮವ್ವ)ದೇವಿ ಮೂರ್ತಿ ಮರು ಪ್ರತಿಷ್ಠಾಪನಾ ಕಾರ್ಯಕ್ರಮ ದಿ.22ರಂದು ಯುಗಾದಿ ಹಬ್ಬದ ದಿನ ನೆರವೇರಲಿದೆ. ಫೆ.8ರಂದು ದೇವಿಯ 6ನೇ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ 9.30ಕ್ಕೆ ಹೋಮ ಹವನಾದಿ, ಸಕಲ ಪೂಜಾ ವಿಧಿ-ವಿಧಾನಗಳೊಂದಿಗೆ ದೇವಿ ಮೂರ್ತಿ ಮರು ಪ್ರತಿಷ್ಠಾಪಿಸಲಾಗುವುದು. ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, 1ಘಂಟೆಯಿಂದ ಅನ್ನ ಸಂತರೆ್ಣ ನಂತರ ಸಂಜೆ 4 ಘಂಟೆಯಿಂದ ಉಡಿ ತುಂಬುವ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಮಾರಿಕಾಂಬಾದೇವಿ ದೇವಸ್ಥಾನದ ಆಡಳಿತ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.