ಭಾರತೀಯ ಜನತಾ ಪಕ್ಷಕ್ಕೆ ಶ್ರೀಕಾಂತ ದುಂಡಿಗೌಡ್ರ ಸೂಕ್ತ ಅಭ್ಯರ್ಥಿ : ಇನಾಮತಿ
ಶಿಗ್ಗಾವಿ 04: ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಕಾಂತ ದುಂಡಿಗೌಡ್ರ ಉಪಚುನಾವಣೆಯಲ್ಲಿ ಭಾಜಪದ ಗೆಲುವು ನಿಶ್ಚಿತ ಎಂದು ಹೇಳಿದರು.
ತಾಲೂಕಿನ ಚಂದಾಪುರ, ರಾಜೀವ್ ಗ್ರಾಮ, ನೀರಲಕಟ್ಟಿ ತಾಂಡಾ ಹಾಗೂ ಕೋಣನಕೆರೆ ಗ್ರಾಮಗಳಲ್ಲಿ ನಮ್ಮ ನಡೆ ಕಾರ್ಯಕರ್ತರ ಕಡೆ ಎಂಬ ಘೋಷ ವಾಕ್ಯದಡಿ ಜನರನ್ನು ಸಂಪರ್ಕಿಸಿ ಮಾತನಾಡಿದ ಅವರು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಹಗರಣಗಳಲ್ಲಿ ಮುಳುಗಿದ್ದು, ಸ್ವಚ್ಛ ಆಡಳಿತ ನೀಡಲು ಈ ಬಾರಿ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
ಜಿ.ಪಂ. ಮಾಜಿ ಸದಸ್ಯ ಬಿ ಟಿ ಇನಾಮತಿ ಮಾತನಾಡಿ ಸ್ಥಳೀಯ ನಾಯಕತ್ವಕ್ಕೆ ಪಕ್ಷ ಮಣೆ ಹಾಕಲಿ ಭಾಜಪದಿಂದ ಶ್ರೀಕಾಂತ ದುಂಡಿಗೌಡ್ರಗೆ ಉಪಚುನಾವಣೆಯ ಟಿಕೆಟ್ ನೀಡಿದರೆ ಜಯ ಖಚಿತ. ದುಂಡಿಗೌಡ್ರರಲ್ಲಿನ ಸಂಘಟನಾ ಶಕ್ತಿ ನೋಡಿದರೆ ಮುಂಬರುವ ದಿನಗಳಲ್ಲಿ ಶಿಗ್ಗಾಂವ-ಸವಣೂರು ಕ್ಷೇತ್ರದಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ , ತಿಪ್ಪಣ್ಣ ಸಾತಣ್ಣವರ, ಡಾ.ಮಲ್ಲೇಶಪ್ಪ ಹರಿಜನ ,ಸಂಗಮೇಶ ಕಂಬಾಳಿಮಠ, ಎನ್.ಎಮ್. ವೆಂಕೋಜಿ, ದೇವಣ್ಣ ಚಾಕಲಬ್ಬಿ, ರವಿ ಕುಡುಒಕ್ಕಲಿಗರ, ವಿರೇಶ ಸೊಬರದ, ಹನುಮರೆಡ್ಡಿ ನಡುವಿನಮನಿ, ನಾಗರಾಜ ಲಂಗೋಟಿ, ಚಂದ್ರಣ್ಣ ಹೆಬ್ಬಾಳ, ರಮೇಶ ಸಾತಣ್ಣವರ, ಬಸವರಾಜ ಮಿರ್ಜಿ, ಗ್ರಾಮದ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಉಪಸಿತ್ಥರಿದ್ದರು.