ಶಿಗ್ಗಾವ್

ಬಿಜೆಪಿ ಪಾಳೆಯದಲ್ಲಿ ಭಿನ್ನಮತ: ಶ್ರೀಕಾಂತ ದುಂಡಿಗೌಡ್ರ ನಡೆ ಯಾವ ಕಡೆ?

ಬಿಜೆಪಿ ಪಾಳೆಯದಲ್ಲಿ ಭಿನ್ನಮತ:  ಶ್ರೀಕಾಂತ ದುಂಡಿಗೌಡ್ರ ನಡೆ ಯಾವ ಕಡೆ?

ಶಿಗ್ಗಾವಿ 23: ಉಪ ಚುನಾವಣೆಗೆ ಬಿಜೆಪಿಯಿಂದ ಭರತ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿ ಭಿನ್ನಮತ ಭುಗಿಲೆದಿದ್ದು, ಪ್ರಭಲ ಆಕಾಂಕ್ಷಿಯಾಗಿದ್ದ ಶ್ರೀಕಾಂತ ದುಂಡಿಗೌಡ್ರ ಮತ್ತು ಅವರ ಅಭಿಮಾನಿ ಬಳಗ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ. 

ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿಯವರು ತಮ್ಮ ಮಗ ಭರತ ಬೊಮ್ಮಾಯಿಯವರನ್ನು ಕ್ಷೇತ್ರದ ಉಪ ಚುನಾವಣೆಯಲ್ಲಿ ನಿಲ್ಲಿಸುವುದಿಲ್ಲಾ ಎಂದು ಬಹಿರಂಗವಾಗಿ ಹೇಳಿದ್ದರು, ಮತ್ತು ನನಗೆ ಟಿಕೇಟ ಕೊಡುವ ಭರವಸೆಯನ್ನು ನೀಡಿದ್ದರು. ಅವರ ಭರವಸೆಯನ್ನು ಸಂಪೂರ್ಣವಾಗಿ ನಂಬಿ, ದೊಡ್ಡಮಟ್ಟದಲ್ಲಿ ಸಮಾಜ ಸೇವೆಯನ್ನು ಮಾಡುವ ಉದ್ದೇಶ ಹೊಂದಿದ್ದೆ. ಬಸವರಾಜ ಬೊಮ್ಮಾಯಿಯವರು ಸತ್ಯ ಮಾತನಾಡದೆ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ. ಜನಪಯೋಗಿ ಕಾರ್ಯಗಳನ್ನು ಮಾಡಬಯಸಿದ ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ. 

ರಾಘವೇಂದ್ರ ದೇಶಪಾಂಡೆ ಮಾತನಾಡಿ, ಕ್ಷೇತ್ರದ ಬಿಜೆಪಿ ವತಿಯಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದ ವ್ಯಕ್ತಿಯನ್ನು ಮೊದಲೇ ನಿರ್ಧಸಿಕೊಂಡು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಪಕ್ಷದ ವರಿಷ್ಠರು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಾಟಕೀಯವಾಗಿ ಮಾಡಿರುವುದು ನಿಷ್ಟಾವಂತ ಕಾರ್ಯಕರ್ತರಾದ ನಮಗೆ ನೋವು ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಮೊದಲು ಸದಸ್ಯತ್ವ ಅಭಿಯಾನ ಮಾಡಿ ನಂತರ ಅಭ್ಯರ್ಥಿಯಾಗಿದ್ದರು. ಆದ್ದರಿಂದ ಪಕ್ಷದ ಕಾರ್ಯಕರ್ತರಾದ ಎಲ್ಲರಿಗೂ ಒಂದೆ ನಿಯಮ ಇದ್ದರೂ ಭರತ ಬೊಮ್ಮಾಯಿಯವರನ್ನು ಅಭ್ಯರ್ಥಿಯನ್ನಾಗಿಸುವಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಬಿಟಿ ಇನಾಮತಿಗೌಡ,  ರಮೇಶ ಸಾತಣ್ಣವರ ತಿಪ್ಪಣ್ಣಾ ಸಾತಣ್ಣವರ, ಸಂಗಮೇಶ ಕಂಬಾಳಿಮಠ, ಎಸ್‌.ಕೆ. ಅಕ್ಕಿ , ಗಂಗಣ್ಣಾ ಹುಲ್ಲೂರ, ನಿಂಗಪ್ಪಾ ದುಂಡಪ್ಪನವರ,  ಬಸಲಿಂಗಪ್ಪಾ ನರಗುಂದ, ಮಲ್ಲೇಶಪ್ಪಾ ಚೋಟಪ್ಪನವರ, ನಾಗರಾಜ ಲಂಗೋಟಿ, ಚಂದ್ರು ಹೆಬ್ಬಾಳ, ಹೇಮರೆಡ್ಡಿ ನಡುವಿನಮನಿ, ಎನ್‌.ಎಂ. ವೆಂಕೋಜಿ, ವಿರುಪಾಕ್ಷಿ ಸಾತಣ್ಣವರ, ಮಲ್ಲೇಶ ಕಲ್ಯಾಣ ಇತರರಿದ್ದರು. 

 ಕ್ಷೇತ್ರದ ಹಿರಿಯರು, ಹಿತೈಸಿಗಳು, ಅಭಿಮಾನಿಗಳು ಮತ್ತು ಮಾರ್ಗದರ್ಶಕರೊಂದಿಗೆ ಚರ್ಚಿಸಿ ಅ.24 ರಂದು ಮುಂದಿನ ರಾಜಕೀಯ ನಡೆಯನ್ನು ಘೋಷಿಸುತ್ತೇನೆ. 

ಶ್ರೀಕಾಂತ ದುಂಡಿಗೌಡ್ರ; ಬಿಜೆಪಿ ಪ್ರಭಲ ಟಿಕೇಟ ಆಕಾಂಕ್ಷಿ. 

 ಕ್ಷೇತ್ರದಲ್ಲಿ ಯಾವುದೇ ಸ್ಥಳೀಯ ವ್ಯಕ್ತಿಯನ್ನು ರಾಜಕೀಯವಾಗಿ ಬೆಳೆಯಲು ಬಸವರಾಜ ಬೊಮ್ಮಾಯಿ ಅವಕಾಶ ಮಾಡಿಕೊಟ್ಟಿಲ್ಲಾ ಮತ್ತು ಶ್ರೀಕಾಂತ ದುಂಡಿಗೌಡ್ರ ಜೊತೆಗೆ ಕ್ಷೇತ್ರದ ಅನುಭವಿ ರಾಜಕಾರಣಿಗಳು ಇದ್ದು, ಅವರೆಲ್ಲರೂ ರಾಜಕೀಯವಾಗಿ ಪೆಟ್ಟು ತಿಂದವರೇ ಆಗಿದ್ದಾರೆ ಎಂದು ಶ್ರೀಕಾಂತ ದುಂಡಿಗೌಡ್ರ ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ. 


ಸುದ್ದಿ ಓದಿ