ಮುದ್ದೆಬಿಹಾಲ್

ಮಾದಯ್ಯ ಶರಣರು ಕಾಯಕದಿಂದಲೇ ಬಸವಣ್ಣನ ಮನಸ್ಸುಗೆದ್ದಿದರು : ಪ್ರದೀಪ್ ಹೂಗಾರ್

ಮಾದಯ್ಯ ಶರಣರು ಕಾಯಕದಿಂದಲೇ ಬಸವಣ್ಣನ ಮನಸ್ಸುಗೆದ್ದಿದರು : ಪ್ರದೀಪ್ ಹೂಗಾರ್

ಮುದ್ದೇಬಿಹಾಳ 19: ಪಟ್ಟಣದ ಪೊಲೀಸ್ ಸ್ಟೇಷನ್ ಹತ್ತಿರಇರುವ ಮತ್ತು ವಿದ್ಯಾನಗರ ಮತ್ತು ಸಾಯಿ ನಗರದ ಹತ್ತಿರವಿರುವ ಬಸವಾದಿ ಶರಣ ಹೂಗಾರ ಮಾದಯ್ಯ ವೃತ್ತದಲ್ಲಿ ಹೂಗಾರ ಸಮಾಜ ಬಾಂಧವರು ಬುಧವಾರ ವಚನಕಾರ ಶ್ರೀ ಶಿವಶರಣ ಹೂಗಾರ ಮಾದಯ್ಯ ಅವರ ಜಯಂತಿಯನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಮಾದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತ ಭಾವ ಮೆರೆದರು. 

ತಾಲ್ಲೂಕು ಹೂಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಪ್ರದೀಪ್ ಹೂಗಾರ್ ಮಾತನಾಡಿ, ‘ಮಾದಯ್ಯ ಇತರ ಶರಣರಂತೆ ತನ್ನ ಕಾಯಕದಿಂದಲೇ ಬಸವಣ್ಣನ ಮನಸ್ಸು ಗೆದ್ದವರು. ಬಸವಣ್ಣವರ ಅನುಭವ ಮಂಟಪದಲ್ಲಿ ಮಾದಯ್ಯ ಅವರಿಗೆ ಸ್ಥಾನವಿತ್ತು’ ಎಂದರು.ಹೂಗಾರ ಮಾದಯ್ಯ ಅವರು ಬಸವಾದಿ ಶರಣರ ಸಮಕಾಲೀನರು. ಹೂಗಾರ ಸಮಾಜಕ್ಕೆ ಹೆಸರು ತಂದುಕೊಟ್ಟ ಹೂಗಾರ ಕಾಯಕದ ಶ್ರೇಷ್ಠತೆ ಮೆರೆದರು. ಬಸವಣ್ಣನವರಿಗೆ ಅಚ್ಚು ಮೆಚ್ಚಿನವರಾಗಿದ್ದರು’ ಎಂದರು. 

ಅದರಂತೆ ಪ್ರೊಫೆಸರ್‌ಎಸ್‌ಎಸ್ ಹೂಗಾರ್ ಮಾತನಾಡಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬುದಕ್ಕೆ ಮಾದಯ್ಯ ಉತ್ತಮ ನಿದರ್ಶನವಾಗಿದ್ದರು. ಅವರು ರಚಿಸಿದ ಕೆಲವೇ ವಚನಗಳು ಲಭ್ಯವಾಗಿವೆ. ಆ ವಚನಗಳಲ್ಲಿ ಅವರು ಸಾಮಾಜಿಕ ಸಮಾನತೆ, ಮೂಢನಂಬಿಕೆ, ಅಂಧಶ್ರದ್ಧೆಯ ಬಗ್ಗೆ ಉಲ್ಲೇಖಿಸಿದ್ದಾರೆ’ ಎಂದರು. ಮುಖಂಡರಾದ ಬಸವರಾಜ್ ಹೂಗಾರ್, ಚಂದ್ರಶೇಖರ್ ಹೂಗಾರ್, ಎಚ್ ಕೆ ಪೂಜಾರಿ,  ಮಾಂತೇಶ್  ವಡವಡಗಿ,ಬಸವರಾಜ ವಡವಡಗಿ, ವಿಜಯ್‌ಕುಮಾರ್ ವಡವಡಗಿ, , ಸಂತೋಷ್ ಹೂಗಾರ್‌.   ಸಂತೋಷ್ ಹೂಗಾರ್ ದಿಂಡ್ವಾರ, ಶಿವರಾಜ್ ಹೂಗಾರ್, ಶರಣು ಹೂಗಾರ್, ಪ್ರಕಾಶ್ ಹೂಗಾರ್ ,ಮುತ್ತಣ್ಣ ಹೂಗಾರ್‌.  ಡಾಕ್ಟರ್‌. ಚಂದ್ರಶೇಖರ್ ಹೂಗಾರ್, ಅಜಿತ್ ಹೂಗಾರ್ ,ಇನ್ನಿತರ ಹಿರಿಯ ಮತ್ತುಗಣ್ಯಮಾನ್ಯ ಹೂಗಾರರು ಸೇರಿ ಸಂಭ್ರಮದಿಂದ ಜಯಂತಿಯನ್ನು ಆಚರಿಸಿದರು, ‘ಶಿವಶರಣ ಹೂಗಾರ ಮಾದಯ್ಯ ಅವರ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಅವರ ಬಗ್ಗೆ ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿಪುಲ ಅವಕಾಶಗಳಿವೆ. ವಿಶ್ವ ವಿದ್ಯಾಲಯಗಳಲ್ಲಿ ಹೂಗಾರ ಮಾದಯ್ಯಅವರ ಬಗ್ಗೆ ಅಧ್ಯಯನ ಕೇಂದ್ರ ಆರಂಭಿಸಬೇಕು’ ಕುಲಕಸುಬು ವ್ಯಾಪಾರಕ್ಕಾಗಿ ಮಳಿಗೆಗಳನ್ನು ಸ್ಥಾಪಿಸಬೇಕು ,ಎಂದು ಎಲ್ಲಾ ಮುಖಂಡರ ಒಪ್ಪಿಗೆಯನ್ನು ಒತ್ತಾಯಿಸಿದರು. 


ಸುದ್ದಿ ಓದಿ