ಶ್ರೀ ಸದ್ಗುರು ಸಂತ ಬಾಳು ಮಾಮರ ಜಾತ್ರೆ
ಸೌದತ್ತಿ,19: ಸೌದತ್ತಿ ತಾಲೂಕಿನ ಹಿರೇ ಬೂದನೂರ ಗ್ರಾಮದಲ್ಲಿ ಜು.17 24 ರಿಂದ ಜು.18 24ರ ವರೆಗೆ ಶ್ರೀ ಸದ್ಗುರು ಸಂತ ಬಾಳು ಮಾಮರ ಜಾತ್ರೆ, ವಿಜೃಂಭಣೆಯಿಂದ ನೆರವೇರಿತು.
ಜು. 17 24 ರಂದು ಸಾಯಂಕಾಲ ಹಿರೇಬೂದನೂರು ಕುಟ್ರನಟ್ಟಿ ಹಾಗೂ ಓಬಲದಿನ್ನಿ ಗ್ರಾಮಗಳ ದೇವರ ಪಲ್ಲಕ್ಕಿಗಳ ಆಗಮನ. ಎಲ್ಲಾ ದೇವತೆಯರ ಪೂಜಾ ಕಾರ್ಯಕ್ರಮ, ಡೊಳ್ಳಿನ ವಾಲಗಳು ,ಭಜನಾ ,ಇನ್ನಿತರ ಭಕ್ತಿಯ ಹಾಗೂ ಮನರಂಜನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಾಗಿದವು. ಪ್ರಸಾದ .ಜು. 18 24 ರಂದು ಬೆಳಿಗ್ಗೆ 9 ಗೆ ರುದ್ರಾಭಿಷೇಕ ಎಲ್ಲ ದೇವ, ದೇವತೆಯರ ಪೂಜಾ ಕಾರ್ಯಕ್ರಮ ಡೊಳ್ಳಿನ ವಾಲಗಳು ಹಾಗೂ ಮಕ್ಕಳಗೇರಿ ಗ್ರಾಮದ ಬಾಲ, ಬಾಲಕಿಯರಿಂದ ವಿಶೇಷ ಡೊಳ್ಳಿನ ವಾಲಗ ನೃತ್ಯ ದೊಂದಿಗೆ ವಿಶೇಷವಾಗಿ ಭಕ್ತಿಯಿಂದ ನಡೆಯಿತು.
ಮಹಾಪ್ರಸಾದ .ನಂತರ ಬಾಳು ಮಾಮಾ ದೇವರಿಗೆ ಬೆಳ್ಳಿ ಉತ್ಸವಮೂರ್ತಿ ತಯಾರಿಕೆಗೆ ಹಿರೇ ಬೂದನೂರ ಗ್ರಾ ಮದ ರಾಜಶೇಖರ ವೀರಪ್ಪ ಉನ್ನಿ ಪ್ರೊಫೆಸರ್ ಜೈನ ಇಂಜಿನಿಯರಿಂಗ್ ಕಾಲೇಜ್ ಬೆಳಗಾವಿ ಹಾಗೂ ಸೋಮಶೇಖರ್ ವೀರಪ್ಪ ಉನ್ನಿ ಬಿಲ್ಡರ್ ಹಾಗೂ ಡೆವಲಪರ್ ಬೆಂಗಳೂರು ಇವರು 3, ಲಕ್ಷ 51,ಗಳನ್ನು ಕಾಣಿಕೆ ನೀಡಿದ್ದು ಅವರಿಗೆ ಕಮೀಟಿಯವರಿಂದ ಹಾಗೂ ಗುರುಹಿರಿಯರಿಂದ ಸನ್ಮಾನಿಸಲಾಯಿತು.
ಅಣ್ಣ ಪ್ರಸಾದಕ್ಕೆ ಸಹಾಯ ಸಹಕಾರ ಮಾಡಿದ ಶ್ರೀ ಸಂತೋಷ ಅಣ್ಣ ರಮೇಶ್ ಜಾರಕಿಹೊಳಿ ಯುವದುರೀಣರು ,ನಂದಿ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಮಾಲೀಕರು ದಿನ, ದಲಿತರ ,ಸದಾ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಎಲ್ಲ ಜಾತಿ ಧರ್ಮಗಳ ದೇವಸ್ಥಾನಗಳ ಬಗ್ಗೆ ಭಕ್ತಿವುಳ್ಳ ಸಂತೋಷ ಅಣ್ಣನವರಿಗೆ ಹಾಗೂ ಪ್ರಸಾದಕ್ಕೆ ಹಾಗೂ ಆಗಾಗ ಹಬ್ಬ ಹರಿ ದಿನಗಳಲ್ಲಿ ಸಹಾಯ ಸಹಕಾರ ನೀಡುತ್ತಾ ಬಂದಿರುವ ಶ್ರೀ ಉತ್ತೂರು ಸ್ವಾಮೀಜಿ ಅವರಿಗೆ ಕಮಿಟಿ ಅವರಿಂದ ಸತ್ಕರಿಸಲಾಯಿತು. ಸುಮಾರು 51 ಊರಿನ 10,000 ಕ್ಕೂ ಹೆಚ್ಚಿನ ಭಕ್ತರು ಈ ಪವಿತ್ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು