ಶ್ರೀ " ಅಭಿನವ ಅನ್ನದಾನೇಶ್ವರ" ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು
ಶ್ರೀ " ಅಭಿನವ ಅನ್ನದಾನೇಶ್ವರ"
ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು
( ನಾಡಿನ ನಂದಾದೀಪ ಹಾಲಕೆರೆ ಶ್ರೀ ಅನ್ನದಾನೇಶ್ವರ
ಸಂಸ್ಥಾನಮಠ )
ಕನ್ನಡ ನಾಡು ಶರಣರ ನಾಡು, ನಾಡಿನಲ್ಲಿ ಕನ್ನಡ ನಾಡು, ನುಡಿ, ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಜೊತೆಗೆ, ಅನ್ನ, ಅಕ್ಷರ, ವಸತಿ ದಾಸೋಹದಂತ ತ್ರಿವಿಧ ದಾಸೋಹಗಳಲ್ಲಿ ಶೈಕ್ಷಣಿಕ ಪ್ರಸಾರದಲ್ಲಿ ನಿರತರಾಗಿರುವಂತಹ ನಾಡಿನ ಹಲವು ಪ್ರಖ್ಯಾತ ಮಠಗಳಲ್ಲಿ " ಹಾಲಕೆರೆ ಶ್ರೀ ಜಗದ್ಗುರು ಅನ್ನದಾನೇಶ್ವರ ಮಠದ ಹೆಸರು ಪ್ರಕಾಶಮಾನವಾದದ್ದು ಎಂದು ಹೇಳಬಹುದು
:- ನಾಡಿನ ನಂದಾದೀಪ ಹಾಲಕೆರೆ ಶ್ರೀ ಅನ್ನದಾನೇಶ್ವರ
ಮಠ :--
ಗದಗ ಜಿಲ್ಲೆಯ, ಗಜೇಂದ್ರಗಡ
ತಾಲೂಕಿನ ( ಈ ಮೊದಲಿನ ರೋಣ ತಾಲೂಕು ) ಚಿಕ್ಕದಲ್ಲದ ಗ್ರಾಮ " ಹಾಲಕೆರೆ
" ಗ್ರಾಮ. ಊರು ಚಿಕ್ಕದಾದರೂ " ನಾಡಿನ ನಂದಾದೀಪ " ವೆಂದೇ ಖ್ಯಾತವಾಗಿದೆ. ಬಳ್ಳಾರಿ, ಕೊಟ್ಟೂರು, ಹಂಪಿ, ಹೊಸಪೇಟೆ,
ನರೇಗಲ್ಲ, ಗದಗ, ಸೇರಿದಂತೆ ನಾಡಿನಾದ್ಯಂತ ಸುಮಾರು 28 ಶಾಖಾಮಠಗಳನ್ನು ಹೊಂದಿರುವ
ಶ್ರೀಮಠದ ವ್ಯಾಪ್ತಿ ಅಪಾರ, ಅಳತೆಗೂ ಮೀರದ್ದು, ನಮ್ಮ ನಾಡಿನಲ್ಲಿ ಮಾತ್ರವಲ್ಲದೇ ಅಕ್ಕ
ಪಕ್ಕದ ರಾಜ್ಯಗಳಲ್ಲಿಯೂ ವಿಶಿಷ್ಟ ಸ್ಥಾನಮಾನ ಪಡೆದು ಭಕ್ತರ ಹೃನ್ಮನಗಳಲ್ಲಿ ಪ್ರತಿಷ್ಠಾಪಿತವಾಗಿರುವದು " ಹಾಲಕೆರೆ ಶ್ರೀ ಜಗದ್ಗುರು ಅನ್ನದಾನೇಶ್ವರ ಮಠ
". ಹಾಲಕೆರೆ ಶ್ರೀ ಮಠದ ಕಟ್ಟಡದ ರೂಪ ಸಾಂಕೇತಿಕ,
ಆದರೆ ಈ ಮಠವು ನಿಜವಾಗಿ ಕಟ್ಟಲ್ಪಟ್ಟಿರುವದು ಭಕ್ತರ ಹೃನ್ಮನಗಳಲ್ಲಿ, ಶ್ರೀಮಠದ ಆವರಣ ಗಾಂಭೀರ್ಯದಿಂದ
ಕೂಡಿರುವಂತದ್ದು, ಭಕ್ತರು ಮಠದ ಆವರಣದಲ್ಲಿ ಮೆಲ್ಲಗೆ ಕಾಲಿಡುತ್ತಲೇ ತನ್ನಿಂತಾನೇ
ಭಕ್ತಿ ಭಕ್ತರ ಹೃನ್ಮನಗಳಲ್ಲಿ ಮೂಡುತ್ತದೆ. ಈ ಮಠದ ಗುರುಗಳು ಭಕ್ತರ ಹೃದಯ ಸಾಮ್ರಾಜ್ಯಾಧಿಪತಿಗಳು.
:- ಶ್ರೀ ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು :--
ಲೌಕಿಕವಾದುದೇನನ್ನು ಅಪೇಕ್ಷೆಸದೇ ಕೇವಲ ತಪೋನುಸ್ಥಾನಗಳಲ್ಲಿ ನಿರತರಾಗಿದ್ದವರು "ಶ್ರೀಗುರು ಅನ್ನದಾನೇಶ್ವರರು ಸಂಸ್ಕೃತವನ್ನು ಅಧ್ಯಯನ ಮಾಡಿದ್ದ ಶ್ರೀಗಳು ಧರ್ಮಗ್ರಂಥಗಳನ್ನು ತಿಳಿದುಕೊಂಡಿದ್ದರು ಇವರಲ್ಲಿದ್ದ ಸ್ವಾಮಿತ್ವದ ಒಳ್ಳೆಯ ಲಕ್ಷಣಗಳನ್ನು ಕಂಡು ತಮ್ಮ ಸ್ಥಾನದಲ್ಲಿ ಮುಂದೆ ಇವರೇ ಸ್ವಾಮಿಗಳಾಗಬೇಕೆಂದು ಹಿರಿಯ ಅನ್ನದಾನೇಶ್ವರ ಸ್ವಾಮಿಗಳು ಇವರನ್ನು ಹಾಲಕೆರೆಗೆ ಕರೆತಂದರು ಗುರುಗಳ ಸೇವೆಯಲ್ಲಿಯೇ ಸದಾಚಾರಗಳನ್ನು ಕಾಣುತ್ತಿದ್ದ ಶ್ರೀಗುರು ಅನ್ನದಾನೇಶ್ವರ ಸ್ವಾಮಿಗಳು ಕಾಲಾನುಕ್ರಮದಲ್ಲಿ ಶ್ರೀ ಅನ್ನದಾನೇಶ್ವರ ಮಠದ ಪೀಠಾಧಿಪತಿಗಳಾಗಿ ಮೂರು ವರ್ಷಗಳ ಕಾಲ " ಕೋಡಿಕೊಪ್ಪದ "'ಪುಣ್ಯ ನೆಲದಲ್ಲಿ ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಪ್ರೇರಣೆಯಂತೆ ತಪೋ ಅನುಸ್ಥಾನ ಕೈಗೊಂಡರು ಇವರು ಅನುಷ್ಟಾನಕ್ಕೆ ಕುಳಿತಾಗ ಹಾವೇರಿಯ ಲಿಂ. ಶಿವಬಸವ ಮಹಾಸ್ವಾಮಿಗಳು ಸಹಿತ ಎಲ್ಲ ಭಾಗದ ವಿರಕ್ತ ಸ್ವಾಮಿಗಳು ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.
:- ಡಾ : ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು :-
ಶ್ರೀ ಅನ್ನದಾನೇಶ್ವರ ಮಠದ 12 ನೇ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು ":ಅಭಿನವ ಅನ್ನದಾನೇಶ್ವರ " ಮಹಾಸ್ವಾಮೀಜಿಗಳಂದೇ ಪ್ರಖ್ಯಾತರಾದವರು. ತ್ರಿಕಾಲ ಪೂಜಾ ನಿಷ್ಠರು, ಜ್ಞಾನಿಗಳು, ವಿರಕ್ತ ಪರಂಪರೆಯ ಮೂಲದವರಾದರೂ ಆಚಾರ್ಯ ಪರಂಪರೆಯನ್ನು ಒಟ್ಟಾಗಿ ತಗೆದುಕೊಂಡು ಹೋಗುವ ಮೂಲಕ "ಮಠಾಧೀಶರ ಪರಂಪರೆಗೆ ಹೊಸ ಭಾಷ್ಯ ಬರೆದವರು.
ಶ್ರೀ ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು ಬಾಗಲಕೋಟ ಜಿಲ್ಲೆಯ ಜಮಖಂಡಿ
ತಾಲೂಕಿನ ಬಿದರಿ ಗ್ರಾಮದಲ್ಲಿ 1936 ರಲ್ಲಿ ಜನಿಸಿದರು. " ರಾಚಯ್ಯ
" ಎಂಬುದು ಮೂಲ ಹೆಸರು ಶ್ರೀಗುರು
ಕುಮಾರ ಮಹಾಶಿವಯೋಗಿಗಳು ಶಿವಯೋಗ ಮಂದಿರದಲ್ಲಿ ಜಂಗಮಾಶ್ರಯ ಪಡೆದು ನಂತರ ಕಾಶಿಯಲ್ಲಿ (ವಾರಣಾಸಿ
) ಉನ್ನತ ವ್ಯಾಸಂಗ ಮಾಡಿದರು ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು , ಹಿಂದಿ,
ಕನ್ನಡ, ಸಂಸ್ಕೃತ, ಇಂಗ್ಲೀಷ್ ಭಾಷೆಗಳಲ್ಲಿ ಪರಿಣಿತರಾಗಿ ಧರ್ಮದ ತತ್ವ ವಿವೇಕಗಳನ್ನು ಪಡೆದು
ಕಾಯಕ ಶಿವಯೋಗಿಗಳಾದರು
ನಾಗನೂರು ರುದ್ರಾಕ್ಷಿಮಠದ ಕಾಯಕ ತಪಸ್ವಿಗಳಾಗಿದ್ದ ಡಾ : ಶಿವಬಸವ
ಮಹಾಸ್ವಾಮಿಗಳ ಮಾನಸ ಶಿಷ್ಯರಾಗಿದ್ದ ಡಾ : ಸಂಗನಬಸವ ಮಹಾಸ್ವಾಮಿಗಳು 1972 ರಲ್ಲಿ ಹುಬ್ಬಳ್ಳಿಯ
ಮೂರುಸಾವಿರ ಮಠದ ಜಗದ್ಗುರುಗಳಾದ ಗಂಗಾಧರ
ರಾಜಯೋಗಿಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠದ
ಜಗದ್ಗುರುಗಳಾದಾಗ ಸಾಮರಸ್ಯದ ದಾರಿ ಕಂಡುಕೊಂಡು ಎಲ್ಲರನ್ನು ಮಠಕ್ಕೆ ಬರುವಂತೆ ಆಹ್ವಾನಿಸಿ
ಶ್ರೀಮಠದ ಶ್ರೇಯೋಭಿವೃದ್ಧಿಗೆ, ಮಠದ ಆಸ್ತಿ ಬೆಳೆಸುವಲ್ಲಿ, ಅನೇಕ ಶಿಕ್ಷಣ ಸಂಸ್ಥೆಗಳನ್ನು
ಸ್ಥಾಪಿಸುವಲ್ಲಿ ಕಾರಣೀಕರ್ತರಾದರು
ಮುಂದೆ 1987 ರಲ್ಲಿ ಶ್ರೀ ನಾಗನೂರು ರುದ್ರಾಕ್ಷಿಮಠದ ಡಾ : ಶಿವಬಸವ ಮಹಾಸ್ವಾಮಿಗಳ ಅಪ್ಪಣೆಯಂತೆ " ಹಾಲಕೆರೆ ಸಂಸ್ಥಾನಮಠದ " 12 ನೇ ಪೀಠಾಧಿಪತಿಗಳಾಗಿ " ಅಭಿನವ ಅನ್ನದಾನೇಶ್ವರ ನಾಮಾಂಕಿತದಿಂದ ಅಧಿಕಾರ ವಹಿಸಿಕೊಂಡು ನರೇಗಲ್ಲ, ಬಳ್ಳಾರಿ, ಶಿವಯೋಗ ಮಂದಿರಗಳನ್ನು ಧಾರ್ಮಿಕ, ಶೈಕ್ಷಣಿಕ ಬೀಡಾಗಿ ರೂಪಿಸಿದರು.
:- - ಶಿವಯೋಗ ಮಂದಿರದ ಕಾಯಕಯೋಗಿ :--
ಬಳ್ಳಾರಿ, ಹೊಸಪೇಟೆ, ಕೊಟ್ಟೂರು ಮಠಗಳ ಪೀಠಾಧ್ಯಕ್ಷರಾಗಿದ್ದ ಡಾ : ಸಂಗನಬಸವ ಮಹಾಸ್ವಾಮಿಗಳು ಬಾಗಲಕೋಟೆ, ಹುಬ್ಬಳ್ಳಿಯ ಬಸವೇಶ್ವರ ವಿದ್ಯಾವರ್ಧಕ ಸಂಘ, ಅನ್ನದಾನ ವಿಜಯ ವಿದ್ಯಾವರ್ಧಕ ಸಂಘ, ಬಳ್ಳಾರಿ ವಿಜಯನಗರ ವಿದ್ಯಾವರ್ಧಕ ಸಂಘ, ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷರಾಗಿದ್ದರು
ಕಳೆದ 25 ವರ್ಷಗಳಿಂದ ಶಿವಯೋಗ ಮಂದಿರದ ಧರ್ಮ ಸಂಸ್ಥೆಗೆ ಅಧ್ಯಕ್ಷರಾಗಿ, ಕಾಯಕಯೋಗಿಗಳಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಶಿವಯೋಗ ಮಂದಿರಕ್ಕೆ ಬರುವ ಭಕ್ತಾದಿಗಳಿಗೆ ಕುಮಾರೇಶ್ವರ ಯಾತ್ರಿ ನಿವಾಸ, ಸದಾಶಿವ ಶ್ರೀ ಯಾತ್ರಿ ನಿವಾಸ, ಕೋಟಿ ರೂ. ವೆಚ್ಚದಲ್ಲಿ ಏಷ್ಯಾ ಖಂಡದಲ್ಲೇ 2ನೇ ಬೃಹತ್ ಎತ್ತರದ ರಥ, ಸುಸಜ್ಜಿತ ಗೋಶಾಲೆ, ವಿಭೂತಿ ತಯಾರಿಕೆ ಕೇಂದ್ರ, ಆಯುರ್ವೇದ ಆಸ್ಪತ್ರೆ, ಗೋಮೂತ್ರ ಬ್ಯಾಂಕ್, ಕುಮಾರ ಶ್ರೀಶೈಲ ಚಿತ್ರ ಸಾಂಸ್ಕೃತಿಕ ಭವನ ನಿರ್ಮಾಣ, ಮಾಡಿದ್ದಾರೆ. ಶ್ರೀಗಳು ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಗಳಿಗೂ, ನಾಡು, ನುಡಿಯ ಕಾರ್ಯಗಳಿಗೂ ಪ್ರೇರಣೆ ನೀಡುತ್ತಿದ್ದರು. ಇವರ ಕಾಲಾವಧಿಯಲ್ಲಿಯೇ ಶಿವಯೋಗ ಮಂದಿರ "ಶತಮಾನೋತ್ಸವ " ಆಚರಿಸಿತು.
:-- ದಣಿವರಿಯದ ಕಾಯಕಯೋಗಿ :--
ದಣಿವರಿಯದ ಕಾಯಕಯೋಗಿ, ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಅಭಿನವ ಅನ್ನದಾನೇಶ್ವರ ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು 85 ವರ್ಷವಾಗಿದ್ದರೂ ಚಟುವಟಿಕೆಯಿಂದ ಇರುತ್ತಿದ್ದರು. ಶ್ರೀಗಳು ಎಲ್ಲ ಸಂಸ್ಥೆಗಳಿಗೂ ಭೇಟಿ ನೀಡುತ್ತಿದ್ದರು. 28 ಶಾಖಾ ಮಠಗಳನ್ನು ಸ್ಥಾಪಿಸಿ, ಸುಮಾರು 60 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ವಸತಿ ದಾಸೋಹದ ಮೂಲಕ ಬೆಳಕಾಗಿದ್ದರು. ಇತ್ತೀಚಿಗಷ್ಟೇ ಹಾಲಕೆರೆ ಬಳಿ ಬಡ ಮಕ್ಕಳಿಗಾಗಿ " ಪ್ರೌಢದೇವರಾಯ ಉಚಿತ ವಸತಿ ನಿಲಯ " ವನ್ನು ಸ್ಥಾಪಿಸಿದ್ದರು.
ಶ್ರೀಗಳು ಕೇವಲ ಶಿಕ್ಷಣ, ಸಾಮಾಜಿಕ, ಧಾರ್ಮಿಕ ಆಧ್ಯಾತ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗದೇ ಬಸವಾದಿ ಶಿವಶರಣರ ವಚನಗಳನ್ನು ನಾಡಿನಾದ್ಯಂತ ಪಸರಿಸುವ ಕಾಯಕದಲ್ಲಿ ನಿರತರಾಗಿದ್ದರು. ಜನಪರ ವಿಚಾರಧಾರೆಗಳನ್ನು ಹೊಂದಿದ್ದರು. " ಶಿವಯೋಗ ಮಂದಿರದಲ್ಲಿ ಗುರು ವಿರಕ್ತರ ಸಮಾವೇಶ ನಡೆಸಿ ಅಖಂಡ ವೀರಶೈವ ಲಿಂಗಾಯತರು ಒಂದೇ ಎಂಬ ಸಂದೇಶ ಸಾರಿದ್ದರು.
1987 ರಲ್ಲಿ ಹಾಲಕೆರೆ ಶ್ರೀ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷ ವಹಿಸಿಕೊಂಡ ಮೇಲೆ ಶೈಕ್ಷಣಿಕ ಕಾರ್ಯಗಳ ಮುಂಚೂಣಿಯಲ್ಲಿ ನಿಂತು ಕೋಡಿಕೊಪ್ಪ, ನರೇಗಲ್ಲ, ಹಾಲಕೆರೆ, ಗದಗ ಜಿಲ್ಲೆ ಸೇರಿದಂತೆ ಹಲವು ಕಡೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶೈಕ್ಷಣಿಕ ಸೇವೆ ನೀಡಿದ ಫಲವಾಗಿ, ನರೇಗಲ್ಲ ಪಟ್ಟಣ ಸೇರಿದಂತೆ ಗದಗ ಜಿಲ್ಲೆ ರಾಜ್ಯದಲ್ಲಿಯೇ ವಿಶೇಷ ಸ್ಥಾನಮಾನ ಹೊಂದುವಂತೆ ಆಯಿತು.
:-- ಗುರುವಂದನೆ ಕಾರ್ಯಕ್ರಮ ಹಾಗೂ ಪಟ್ಟಾಭಿಷೇಕ :-
ನವೆಂಬರ್ 8, 9, 10 ಗದಗ ಜಿಲ್ಲೆಯ ಪಾಲಿಗೆ ಐತಿಹಾಸಿಕ ದಿನಗಳಾಗಿ ದಾಖಲಾಗಿದ್ದು ಹಾಗೂ ಹಾಲಕೆರೆ ಶ್ರೀ ಜಗದ್ಗುರು ಅನ್ನದಾನೇಶ್ವರ ಮಠಕ್ಕೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನಗಳವು. ಇಡೀ ನಾಡಿನ ಶರಣರೇ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಈ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾಗಿದ್ದರು.
ನಾಡಿನ ಸಮಸ್ತ ಭಕ್ತರ ಪರವಾಗಿ ಶ್ರೀ ಅಭಿನವ ಅನ್ನದಾನೇಶ್ವರ ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು 85 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಅಂಗವಾಗಿ ಶ್ರೀಗಳಿಗೆ ಗುರುವಂದನೆ ಸಲ್ಲಿಸುವದು ಹಾಗೂ ದಿನಾಂಕ 10 ರಂದು "ಮುಪ್ಪಿನ ಬಸವಲಿಂಗ ದೇವರ " ನಿರಂಜನ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಅಕ್ಕ ಪಕ್ಕದ ರಾಜ್ಯದ 250 ಕ್ಕೂ ಹೆಚ್ಚು ಮಠಾಧೀಶರು, ಲಕ್ಷಾಂತರ ಸಂಖ್ಯೆಯ ಭಕ್ತರು ಈ ಶುಭ ಮಹೋತ್ಸವಕ್ಕೆ ಸಾಕ್ಷಿಭೂತರಾಗಿದ್ದರು
ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ನೂತನ ಪೀಠಾಧ್ಯಕ್ಷರಾದ ಷಟಸ್ಥಳ ಬ್ರಹ್ಮೋಪದೇಶ ಪಡೆದು " ಗುರು ಅಭಿನವ ಅನ್ನದಾನ ಸ್ವಾಮೀಜಿ " ಎಂದು ಅಭಿದಾನ ಹೊಂದಿರುವ ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ದೇವರು ಜ್ಞಾನಿಗಳಾಗಿದ್ದು ಪ್ರತಿಭಾ ಸಂಪನ್ನರಾಗಿದ್ದು ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದಾರೆ.
:-- ನಾಡಿನ ನಂದಾಜ್ಯೋತಿ :--
28 ಶಾಖಾಮಠಗಳನ್ನು ಹೊಂದಿ, ಹಲವಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದ, ಡಾ : ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು ಎಂದೇ ಖ್ಯಾತರಾಗಿದ್ದ ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿಗಳು ತಮ್ಮ ಶಿಷ್ಯರಾಗಿದ್ದ ಶ್ರೀ " ಮುಪ್ಪಿನ ಬಸವಲಿಂಗ ದೇವರು " ಅವರಿಗೆ ಪಟ್ಟಾಭಿಷೇಕ ನೆರವೇರಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರ್ಣ ಗೊಳಿಸಿದ್ದಾರೆ.
ಹಾಲಕೆರೆ ಡಾ :ಅಭಿನವ ಅನ್ನದಾನೇಶ್ವರ ಲಿಂ. ಜಗದ್ಗುರು ಡಾ : ಸಂಗನಬಸವ ಮಹಾಸ್ವಾಮಿ ಅಜ್ಜನವರು ಈ ಲೋಕದಲ್ಲಿ ಶಾಶ್ವತವಾಗಿ ಪ್ರಕಾಶಿಸುತ್ತಿರುವ ಜ್ಯೋತಿ ಇದ್ದಂತೆ, ಆ ಜ್ಯೋತಿಯಿಂದ ಭಕ್ತಿಯುಳ್ಳವರೆಲ್ಲರೂ ತಮ್ಮ ತಮ್ಮ ಜೀವನದ ಹಣತೆಗಳನ್ನು ಹಚ್ಚಿಕೊಳ್ಳಬಹುದು. ಅವರೊಂದು ನಂದಾದೀಪ, ನಂದಾಜ್ಯೋತಿ, ನಾಡನ್ನು ರಾಷ್ಟ್ರವನ್ನು, ವಿಶ್ವವನ್ನು ಪ್ರಕಾಶಮಾನವಾಗಿ ಮಾಡಬಲ್ಲ ನಂದಾದೀಪ. ಪ್ರಕಾಶಕ್ಕೆ ಕೊರತೆಯೇ ಇಲ್ಲ
ಹಾಲಕೆರೆ ಶ್ರೀ ಅಜ್ಜನಂತವರ ಪರಮ ತಪಸ್ವಿಗಳಿಂದ ನಾಡಿನ ಅಭ್ಯುದಯ ಸಾಧ್ಯ
ಈರಣ್ಣ ಗದಗಿನಮಠ
ಸಹಾಯಕ ಗ್ರಂಥಪಾಲಕರು
ಎಸ್
ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ
ಬೆಳಗಾವಿ.