ಅಪರೂಪದ ಕ್ಯಾಟ್ ಸ್ನೇಕ್
ಮುಂಡಗೋಡ: ತಾಲೂಕಿನಲ್ಲಿ ಬ್ಯಾನಳ್ಳಿ ಗ್ರಾಮದಲ್ಲಿ ಗುರುವಾರ ಅಪರೂಪದ ಕ್ಯಾಟ್ ಸ್ನೇಕ್(ಹಾವು) ಕಾಣಿಸಿಕೊಂಡಿದ್ದು, ಜನರಲ್ಲಿ ಬಯದ ವಾತಾವರಣ ಸೃಷ್ಟಿಸಿತ್ತು.
ಬ್ಯಾನಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅಂಚಿನಲ್ಲಿ ಈ ಕ್ಯಾಟ್ ಸ್ನೇಕ್ ಹಾವು ಕಾಣಿಸಿಕೊಂಡಿದೆ. ಶಾಲೆಯ ಮುಖ್ಯಾಧ್ಯಾಪಕ ವಸಂತಕುಮಾರ ರಾಥೋಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ಹಾಗೂ ಉರಗ ತಜ್ಞ ಶ್ರೀಧರ ಬಜಂತ್ರಿ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಕ್ಯಾಟ್ ಸ್ನೇಕ್ ಹಾವು ಕಾಣಸಿಗುವುದು ಅಪರೂಪವಾಗಿದ್ದು, ಸಾವಿರಾರು ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದದೇವೆ. ಆದರೆ ಕ್ಯಾಟ್ ಸ್ನೇಕ್ ಹಾವು ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಶ್ರೀಧರ ಬಜಂತ್ರಿ ತಿಳಿಸಿದರು.