ಮುಂದಗೋಡ

ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಸಚಿವ ಶಿವರಾಮ ಹೆಬ್ಬಾರ

ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಸಚಿವ ಶಿವರಾಮ ಹೆಬ್ಬಾರ

ಮುಂಡಗೋಡ: ಚಂಡಿಗಡದಲ್ಲಿ ನಡೆದ 59ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಪಟುಗಳಿಗೆ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ ಅವರು ಶನಿವಾರ ತಮ್ಮ ಕಚೇರಿಯಲ್ಲಿ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. 

ಈ ವೇಳೆ ಮಾತನಾಡಿದ ಅವರು ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ರೋಲರ್ ಸ್ಕೇಟಿಂಗ್ ಹಾಕಿಯ ಕರ್ನಾಟಕದ ತಂಡದಲ್ಲಿ ನಮ್ಮ ಜಿಲ್ಲೆಯ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸದ ವಿಷಯ ಎಂದರು. 

ಈ ಸಂದರ್ಭದಲ್ಲಿ ಕೈಗಾದ ಮುಖ್ಯ ತರಬೇತುದಾರ ದೀಲೀಪ್ ಹಣಬರ್, ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷ ಪ್ರಕಾಶ ಶೇಟ್, ಶರೀಫ್ ಹಾರ್ಸಿಕಟ್ಟಾ, ಸತೀಶ ನಾಯ್ಕ, ಸಂಜೀವ್ ಪಿಸೆ, ಕ್ರೀಡಾಪಟುಗಳಾದ ನಂದಿನಿ ಚವ್ಹಾಣ, ರಾಹುಲ್ ಮಳಗನಕೊಪ್ಪ ಸೇರಿದಂತೆ ಮುಂಡಗೋಡ ತಾಲೂಕಿನ 14 ಕ್ರೀಡಾಪಟುಗಳು, ಪಾಲಕರಾದ ಮೋಹನ ಚವ್ಹಾಣ, ಸೋಮನಾಥ ಮಳಗನಕೊಪ್ಪ, ಫಕೀರಸ್ವಾಮಿ ಗುಲ್ಯಾನವರ, ಸುರೇಶ ಹುದ್ಲಮನಿ ಹಾಗೂ ಇತರರು ಹಾಜರಿದ್ದರು. 


ಸುದ್ದಿ ಓದಿ