ಮಕ್ಕಳ ಸರ್ವಾಂಗೀಣ ಏಳ್ಗೆಗೆ ಕ್ರೀಡೆಗಳು ಬಹು ಮುಖ್ಯ: ನಾಯಕ
ತಾಳಿಕೋಟೆ08: ಕಳೆದೆರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕ್ರೀಡಾಕೂಟಗಳ ನಡೆಸಲು ಸಾಧ್ಯವಾಗಿಲ್ಲ, ಮಕ್ಕಳ ಸರ್ವಾಂಗೀಣ ಏಳ್ಗೆಗೆ ಕ್ರೀಡೆಗಳು ಬಹು ಮುಖ್ಯವಾಗಿವೆ, ಈ ಬಾರಿ ಕ್ರೀಡಾಕೂಟಗಳು ನಡೆಯಲಿದ್ದು ಕ್ರೀಡಾಕೂಟಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ದಪಡಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ನಾಯಕ ಹೇಳಿದರು.
ಅವರು ಪಟ್ಟಣದ ಎಸ್.ಕೆ.ಪದವಿ ಪೂರ್ವ ಕಾಲೇಜು ( ಪ್ರೌಢಶಾಲೆ) ಯಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಿಗೆ ವಾರ್ಷಿಕ ಕ್ರೀಡಾಕೂಟಗಳ ಸಂಘಟನೆಯ ಕುರಿತಾಗಿ ಪೂರ್ವಭಾವಿ ಸಭೆ, ಕಾರ್ಯಾಗಾರ ಹಾಗೂ ನಿವೃತ್ತ ದೈಹಿಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳನ್ನು ಕೇವಲ ಓದುವನ್ನು ಮಾತ್ರ ಕಲಿಸಿಕೊಟ್ಟಿದ್ದೇವೆ. ಸರಿಯಾಗಿ ತರಗತಿ ನಡೆಯದ ಕಾರಣ ಅದೂ ಕೂಡಾ ಅಷ್ಟಕಷ್ಟೆ. ಇದೀಗ ಕೊರೊನಾ ಕಡಿಮೆಯಾಗಿದ್ದು ಈ ಭಾರಿ ಮೊದಲಿನಂತೆ ಎಲ್ಲವು ನಡೆಯಲಿದೆ. ಕ್ರೀಡಾಕೂಟಕ್ಕೆ ಎಲ್ಲ ದೈಹಿಕ ಶಿಕ್ಷಕರು ಪೂರ್ವ ತಯಾರಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನಿಡಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಮಾತನಡುತ್ತ ಶಿಕ್ಷಕರು ಈ ಬಾರಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಬೇಕು ಮಕ್ಕಳು ಕ್ರೀಡಾಕೂಟದಲ್ಲಿ ಹೆಚ್ಚು ಭಾಗವಹಿಸಲು ಪ್ರೋತ್ಸಾಹಿಸಿ ಆದರೆ ನಮ್ಮದೇ ಗೆಲುವು ಆಗಬೇಕು ಎಂಬುದಾಗಿ ಹೆಳಬೇಡಿರಿ. ಕ್ರೀಡಾಕೂಟದಲ್ಲಿ ಮಕ್ಕಳು ಗೆಲವು ಸಾಧಿಸಲಿ ಶಿಕ್ಷಕರು, ಬಿ.ಆರ್.ಸಿ ಗೆಲುವು ಬೇಡ. ಇದರಲ್ಲಿ ಮಕ್ಕಳ ಗೆಲುವು ಸೋಲುಗಳನ್ನು ಶಾಲೆ ಅಥವಾ ಶಿಕ್ಷಕರು ಪತಿಷ್ಠೆಯಾಗಿ ಸ್ವೀಕರಿಸಬಾರದು ಎಂದರು.
ನಿವೃತ್ತ ದೈಹಿಕ ಶಿಕ್ಷಕ ಎ.ಎಮ್. ಮೇಟಿ, ಬಿ.ಎಸ್.ಚಿತಾಪುರ, ಬಿ.ಬಿ.ಬಿರಾದಾರ, ಎಸ್.ಎಮ್.ಗೌಡರ ಹಾಗೂ ತುಂಬಗಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಬಿರಾದಾರ, ಸುರೇಶ ಆಲೂರ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಉಪಪ್ರಾಚಾರ್ಯ ಎಸ್.ಡಿ.ಕರಜಗಿ ವಹಿಸಿದ್ದರು. ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ವೇದಿಕೆಯಲ್ಲಿ ಇದ್ದರು. ಎಸ್.ಕೆ.ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ತಾಲ್ಲೂಕು ದೈಹಿಕ ಶಿಕ್ಷಣ ಆಧಿಕಾರಿ ಎಚ್.ಎಲ್.ಕರಡ್ಡಿ ಸ್ವಾಗತಿಸಿದರು. ಅನಿಲಕುಮಾರ ಇರಾಜ ನಿರೂಪಿಸಿ ವಂದಿಸಿದರು.