ಧಾರವಾಡ - ಹುಬ್ಬಳ್ಳಿ

ಕ್ರೀಡಾ ಮಹೋತ್ಸವ 2025-26 ; ಕುಮಾರಿ ಪ್ರಣಮ್ಯ ಹಡಗಲಿ ಸಾಧನೆ

ಕ್ರೀಡಾ ಮಹೋತ್ಸವ 2025-26 ; ಕುಮಾರಿ ಪ್ರಣಮ್ಯ ಹಡಗಲಿ ಸಾಧನೆ


ಧಾರವಾಡ 27: ಖೇಲೋ ಇಂಡಿಯಾ ಫಿಟ್ ಇಂಡಿಯಾ ಕೇಂದ್ರ ಸಂಸದರಾದ  ಪ್ರಲ್ಹಾದ ಜೋಶಿ ಇವರು ಪ್ರಸ್ತುತಪಡಿಸಿದ "ಧಾರವಾಡ ಸಂಸದ ಕ್ರೀಡಾ ಮಹೋತ್ಸವ 2025-26" ಅಂಗವಾಗಿ ಆಯೋಜಿಸಿದ್ದ (ಗ-17) ಕ್ರೀಡೆಗಳಲ್ಲಿ ಜೆ.ಎಸ್‌.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ  ಕುಮಾರಿ ಪ್ರಣಮ್ಯ ಹಡಗಲಿ ಭಾಗವಹಿಸಿ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, 100 ಮೀಟರ್ ಓಟದಲ್ಲಿ ತೃತೀಯ ಸ್ಥಾನಗಳಿಸಿ ಪ್ರಶಸ್ತಿ ಪತ್ರ, ಪದಕಗಳೊಂದಿಗೆ ಒಟ್ಟು  13000/- ನಗದು ಹಣವನ್ನು ಬಹುಮಾನವಾಗಿ ಪಡೆದು ಶಾಲೆಗೆ ಮತ್ತು ಸಂಸ್ಥೆಗೆ  ಕೀರ್ತಿ ತಂದಿರುತ್ತಾಳೆ. ಸಾಧನೆಗೈದ ವಿದ್ಯಾರ್ಥಿನಿಯನ್ನು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿಗಳಾದ  ಅರಿಹಂತ ಪ್ರಸಾದ, ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ, ಪ್ರಾಚಾರ್ಯೆ . ಮೈನಾವತಿ ದಿವಟೆ ಅಭಿನಂದಿಸಿದ್ದಾರೆ. 


ಸುದ್ದಿ ಓದಿ