ಹುಕ್ಕೇರಿ

ಹುಕ್ಕೇರಿಯಲ್ಲಿ ಕೊರೊನಾ ಸ್ಫೋಟ

ಹುಕ್ಕೇರಿಯಲ್ಲಿ ಕೊರೊನಾ ಸ್ಫೋಟ

ಹುಕ್ಕೇರಿ , ಜುಲೈ 15: ಹುಕ್ಕೇರಿ ಪಟ್ಟಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ನಾಲ್ಕು ದಿನಗಳ ಹಿಂದೆ ಬಸ್ ನಿಲ್ದಾಣ ಸನಿಹದ ಬೇಪಾರಿ ಗಲ್ಲಿಯ ಓರ್ವ ಮಹಿಳೆ ನಿಧನ ಹೊಂದಿದ್ದು ಅದನ್ನು ಸೀಲಡೌನ ಮಾಡಲಾಗಿದೆ.ಹಳ್ಳದಕೇರಿ ಭಾಗದ ಗಲ್ಲಿಯೊಂದರ ಮೂವರು ಯುವಕರನ್ನು ೪ ದಿನಗಳ ಹಿಂದೆ  ಕೊರಂಟೈನಗೊಳಪಡಿಸಿದ್ದು ಇವರಲ್ಲಿ ಓಡಿಹೋಗಿದ್ದು ಕಾಳಜಿಗೆ ಕಾರಣವಾಗಿದೆ.ಇದೇ ಹಳ್ಳದಕೇರಿಯ ಸುಣಗಾರ ಗಲ್ಲಿಯ ಓರ್ವ ಕಿರಾಣಿ ವ್ಯಾಪಾರಸ್ಥನಿಗೆ ಕೊರೋನಾ ತಗಲಿದ್ದು ಬಿಮ್ಸಗೆ ದಾಖಲಿಸಲಾಗಿದೆ.ಈಗ ಸುಣಗಾರ ಗಲ್ಲಿಯನ್ನು ಒಂದು ತಾಸಿನ ಹಿಂದೆ ಸೀಲಡೌನ ಮಾಡಲಾಗಿದೆ.ಇದೇ ವರ್ತಕನ ಪೇಟೆಯ ಕಿರಾಣಿ ಅಂಗಡಿಯಿಂದ ಸಾಮಾನು ತೆಗೆದುಕೊಂಡವರು ಈಗ ಚಿಂತಿತರಾಗಿದ್ದಾರೆ.ಇದೇ  ಅಂಗಡಿಯಲ್ಲಿ ಕೆಲಸ ಮಾಡುವ ಓರ್ವ ವ್ಯಕ್ತಿ ಮತ್ತೊಂದು ಗಲ್ಲಿಯಲ್ಲಿ ಇರುತ್ತಿದ್ದು ಇವನು ಮತ್ತಿವನ ಗಲ್ಲಿಯವರು ಆತಂಕಗೊಂಡಿದ್ದಾರೆ.ಪೇಟೆ ಕಾರಂಜಿ ಬಳಿಯ ಗಲ್ಲಿಯೊಂದರ ವ್ಯಕ್ತಿ ಶಂಕಿತ ಸೋಂಕಿತನನ್ನು ಬಿಮ್ಸಗೆ ಸ್ಥಳಾಂತರಿಸಲಾಗಿದೆ.

       ಇದೆಲ್ಲದರ ಹಿನ್ನೆಲೆ ಗಮನಿಸಿದರೆ ಹುಕ್ಕೇರಿ ಪಟ್ಟಣದಲ್ಲಿ ಕೊರೋನಾದ ಪರಿಸ್ಥಿತಿ ಗಂಭೀರವಾಗಿದ್ದು ಪಟ್ಟಣವನ್ನು ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ಲಾಕಡೌನ ಮಾಡುವ ಅವಶ್ಯಕತೆ ಈಗಿದೆ.

      ಈ ದಿಶೆಯಲ್ಲಿ ಶಾಸಕರು ಹಾಗೂ ತಾಲೂಕು ಆಡಳಿತ ಕೂಡಲೇ ಗಮನ ಹರಿಸಿ ತುರ್ತು ಕ್ರಮ ಕೈಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಪ್ರಕಾಶ ದೇಶಪಾಂಡೆ ಅವರು ಒತ್ತಾಯಿಸಿದ್ದಾರೆ.

ಸುದ್ದಿ ಓದಿ