ಬಳ್ಳಾರಿ

ಅಗ್ನಿ ಅವಘಡ ತಡೆಗೆ ವಿಶೇಷ ಕಾರ್ಯಗಾರ

ಅಗ್ನಿ ಅವಘಡ ತಡೆಗೆ ವಿಶೇಷ ಕಾರ್ಯಗಾರ

ಬಳ್ಳಾರಿ 24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಅರಿವು ಮತ್ತು ಅಗ್ನಿ ಅನಾಹುತಗಳು ತಡೆಯುವ ದಿನಾಚಾರಣೆ ನಿಮಿತ್ತ ಒಂದು ದಿನದ ವಿಶೇಷ ಕಾರ್ಯಗಾರವನ್ನು ಬಿಡಿಡಿಎಸ್ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಸಲಾಯಿತು.  

ಕಾರ್ಯಗಾರದಲ್ಲಿ ಬಳ್ಳಾರಿ ತಾಲೂಕಿನ ಸುಮಾರು 27 ಹಳ್ಳಿಗಳಿಂದ ಗ್ರಾಮ ಪಂಚಾಯತಿ ಸದಸ್ಯರುಗಳು ತರಬೇತಿಯನ್ನು ಪಡೆಯಲು ಹಾಜರಿದ್ದರು. ಇವರಿಗೆ ಪ್ರಥಮ ಚಿಕಿತ್ಸೆ, ಅಗ್ನಿ ದುರಂತಗಳ ಬಗ್ಗೆ ವಿಷೇಶವಾಗಿ ಅರಿವು ಮೂಡಿಸಿ ಮತ್ತು ಈ 27 ಗ್ರಾಮಗಳಿಂದ ಬಂದಿದ್ದ ಜನರು ತರಬೇತಿಯನ್ನು ಪಡೆದು ಅವರ ಗ್ರಾಮದಲ್ಲಿ “ಫಸ್ಟ್‌ ರೆಂಪಾಂಡರ್‌” ಕಾರ್ಯ ನಿರ್ವಹಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. 

ಈ ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಎಂ.ಎ.ಷಕೀಬ್, ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮುಖ್ಯ ತರಬೇತುದಾರರು ಇವರು ವಿಷೇಶ ಉಪನ್ಯಾಸವನ್ನು ನಡೆಸಿದ್ದರು.  

ಬೇಪಾರ್ ಮಹಮ್ಮದ್ ಇಜಾಜ್, ಸರ್ವ್‌ ತರಬೇತುದಾರರು ಇವರು ಪ್ರಥಮ ಚಿಕಿತ್ಸೆ ಕುರಿತು ಉಪನ್ಯಾಸವನ್ನು ನಡೆಸಲಾಯಿತು. ಈ ಕಾರ್ಯಗಾರದಲ್ಲಿ ಮಹಬೂಬ್ ಬಾಷಾ, ಶಿವ ಸಾಗರ್, ರಿಜ್ವಾನ, ವಲ್ಡ್‌ ವಿಷಣ್ ಸಂಸ್ಥೆಯ ಪ್ರೇಮಲತ, ಪ್ರೋಜೆಕ್ಟ್‌ ಆಫೀಸರ್ ಮತ್ತು ಸುಮಾರು 50ಜನ ವಿವಿಧ ಗ್ರಾಮಗಳ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ